ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವ ನಾನಲ್ಲವೇ ರಂಗಯ್ಯ ನನ್ನವ ನೀನಲ್ಲವೇ ಪ ನಿನ್ನವ ನಾನಲ್ಲವೆಂದರೆ ಬಿಡಲೊಲ್ಲೆ ಎನ್ನ ಕೈಬಿಡಲೊಲ್ಲೆ ಎಂಬುದ ನಾ ಬಲ್ಲೇ ಅ.ಪ ಧನವನು ಕೊಡಬೇಕೇ ರಂಗಯ್ಯ ಮನೆಮಠಗಳು ಬೇಕೇ ಕನಕಲಕ್ಷ್ಮಿ ವೈಕುಂಠವಿರಲ್ಕೆ ಧನ ಮನೆ ಮಠಗಳ ಯೋಚನೆಯೇಕೆ 1 ಜನಕನು ನೀನಲ್ಲವೇ ರಂಗಯ್ಯ ತನಯನು ನಾನಲ್ಲವೇ ತನುಮನಧನಗಳು ನಿನಗೇ ಸಲ್ಲವೇ ಎನಗಿರ್ಪುದು ನಿನ್ನ ಭಜನೆಯೊಂದಲ್ಲವೇ 2 ನನ್ನದೇನಿಹುದಯ್ಯ ರಂಗಯ್ಯ ನಿನ್ನದೇ ನಿಜವಯ್ಯ ನಿನ್ನ ಕೈಗೊಂಬೆ ನಾನಾಗಿಹೆನಯ್ಯಾ ಎನ್ನವ ನೀ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್