ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧನದ ಚಿಂತೆ ಎನಗ್ಯಾಕೊ ದೇವ ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ ಅನ್ಯಥಾ ಬೇಕಿಲ್ಲ ದೋಷರಹಿತ ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ 1 ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ ಪಡುವ ಭೋಗಗಳೆಲ್ಲ ನಿನ್ನ ಉಪಚಾರ 2 ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ ತಾಪ ಯೋಚನೆಗಳೆಲ್ಲ ತಪಸು ವಿಭುವೆ ಗೋಪ ಚೂಡಾರತ್ನ ಜಯೇಶವಿಠಲ ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ 3
--------------
ಜಯೇಶವಿಠಲ