ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲು ರಮ್ಯವಾಗಿದೆ ಹರಿಯ ಮಂಚ ಪ ಎಲರುಣಿಕುಲ ರಾಜ ರಾಜೇಶ್ವರನ ಮಂಚಅ.ಪ. ಪವನತನಯನ ಮಂಚ ಪಾವನತರ ಮಂಚ ಭುವನತ್ರಯನ ಪೊತ್ತ ಭಾರಿಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ 1 ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಡಿದ ಮಂಚ ತಾಲ ಮುಸಲ ಹಲವ ಪಿಡಿದಿರುವ ಮಂಚ 2 ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸ ರುದ್ರನನು ಪಡೆದ ಮಂಚ ಭಿಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ 3 ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತ್ತಿಸಿ ಹಿಗ್ಗುವ ಮಂಚ ದೇವಕೀಜಠರದಿ ಜನಿಸಿದ ಮಂಚ4 ವಾರುಣೀ ದೇವಿ ವರನೆನಿಸಿದ ಮಂಚ ಸಾರುವ ಭಕುತರ ಸಲಹೊ ಮಂಚ ಕಾರುಣ್ಯನಿಧಿ ಜಗನ್ನಾಥ ವಿಠಲನ ವಿ ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ5
--------------
ಜಗನ್ನಾಥದಾಸರು
ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ ಪ. ಶೃಂಗಾರಪುರುಷರು ಬಹುಮಂದಿಯಿರಲುಅ.ಪ. ಮುಟ್ಟಿನೋಡಿದರೆ ಮೈಯತಿ ಕಠಿಣವು ಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು ಇಷ್ಟು ಘೋರಮುಖದಳಿಯನೆಲ್ಲ್ಲಿ ದೊರಕಿದನೊ 1 ಬಡವನು ಭಿಕ್ಷುಕನು ಬಡಬನಂದದಿ ಕೋಪವು ನೋಡಿದರೆ ತಲೆ ಜಟಿಯು ಕಟ್ಟಿಹುದು ಜಾರ ಚೋರನಿಗೆ ನೋಡಿ ನೋಡಿ ಹೆಣ್ಣ ಹ್ಯಾಂಗೆ ಕೊಟ್ಟನು 2 ಭಂಡನಾಗಿರುವನು ಕಂಡವರೊಡನೆ ಕಾಳಗವ ಕೊಂಡುಬಹ ಬಲು ಉದ್ದಂಡನಿವನು ಅಂಡಜವಾಹನಗೆ ಯೋಗ್ಯವಾದ ಹೆಣ್ಣ ಕಂಡುಕಂಡೀ ಹಯವದನಗೆ ಕೊಟ್ಟನ್ಹ್ಯಾಗೆ 3
--------------
ವಾದಿರಾಜ