ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಮ್ಮಳವೇ ಪೊಗಳಲಮ್ಮಮ್ಮಾ ಬೊಮ್ಮನರಿಯ ನಿಮ್ಮ ಮಹಿಮಾ ಪ ಭೂತಳದೊಳರವು ಸಕಲ ಉಂಟೆಂದು ಖ್ಯಾತಿಯಿಂದ ನಾನಾತೆರದಿ ಸ್ತುತಿಸೆ ಮಾತಿಗೆ ವಿಗತ ಕಗತ ವಾಗೆ ಶೃತಿಗಳು ನೇತಿ ನೇತಿ ತಿರುಗಿದ ಬಳಿಕಾ 1 ಕುಸುಮನಾಭೇನನ ಸಾಮೀಪೆಂಬಾ ತವಕದಿ ಅಸಮ ತೆರದಿ ಪೊಗಳಲು ಚರಿತಾ ದ್ವಿಸಹಸ್ರ ಜಿವ್ಹಕ ಮೀರಿ ಪೊಗಳುತ ಅತಿ ಕುಶಿದು ತಲೆವಾಗಿ ತಾ ನಾಚಿದ ಬಳಿಕ2 ತರಣಿ ಕೋಟಿತೇಜ ಸ್ವರೂಪ ಜ್ಯೋತಿಯ ಅನ ವರತ ಹೃದಯ ಮಂದಿರದೊಳಿರಿಸಿ ಮೆರವುತ ನಿನಗತಿ ಬ್ರಯರಾದಾ ಭಕುತರಾ ಸ್ಮರಣೆ ಯೋಗ್ಯವಲ್ಲದೆ ಮಹಿಪತಿಸುತ ಪ್ರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರ್ಯಾದಿ ಗುಣ ವಳ್ಹದೋ | ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ಪ ಅರಸುವಲಿದು ಅತಿ ಪ್ರೀತಿ ಮಾಡಿದರೇನು ? ಕರಗಳ ಮುಗಿದು ನಿಂದಿರಬೇಕು ಚರನು 1 ಹಿಂಗದೆ ಭಕುತಿಗೆ ಬೆಜ್ಜರ ವಿಡಿದರ | ಬಂಗಾರಕ ಸುವಾಸನೆಯು ಬಂದಂತೆ 2 ಕುದುರೆಗೆ ಉತ್ತತ್ತಿ ತುಸು ಕೊಟ್ಟರಾರೋಗ್ಯ | ಅದೇ ವಿಶೇಷ ಕೊಡಲು ವಿಪರೀತವೋ 3 ಯೋಗ್ಯವಲ್ಲದ ಅಲಂಕಾರಿಸಿಕೊಂಡರೆ ತನ್ನ | ಶ್ಲಾಘ್ಯವೇ ಜಗದೊಳು ಉಪಹಾಸ್ಯ ಮೂಲಾ 4 ತರಳತನವ ಬಿಟ್ಟೆಚರದಲಿ ನಡಿಬೇಕು | ಗುರು ಮಹಿಪತಿಸುತ ಪ್ರಭು ನೊಲುವಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು