ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ1 ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ 2 ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ3 ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ4 ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ 5
--------------
ಚಿದಾನಂದ ಅವಧೂತರು