ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದಿ ಸಲಹೋ | ಜಯರಾಯ ಪ ಕಾಗಿಣಿ ನಿಲಯ | ಕವಿಜನಗೇಯ ಯೋಗಿವರಿಯ ಕೃಪಾಸಾಗರ ಸತತ 1 ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ ಮುರಿದು ಕುಭಾಷ್ಯವ | ಮೆರೆದ ಮಹಾತ್ಮ 2 ಭೀಮ ಭವಾಟಲಿ | ಧೂಮಧ್ವಜ ಸಂ ಸಿರಿ | ಶಾಮಸುಂದರಪ್ರಿಯ 3
--------------
ಶಾಮಸುಂದರ ವಿಠಲ
ಪವಮಾನ ಪಾವನ ಚರಿತ ಪದ್ಮ ಭವನ ಪದಾರ್ಹನೆ ನಿರುತ ಅಹ ಪ ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ. ಪ್ರಾಣೋಪಾನ ವ್ಯಾನೋದಾನ ಹೇ ಸ ಮಾನ ರೂಪಕನೆ ವಿಜ್ಞಾನ ತತ್ವ ಗೀರ್ವಾಣ ಅಹ ಸೇನಾಧಿಪತಿ ನಿನ್ನ ಜ್ಞಾನಸಾರದಲಿಪ್ಪ ಮಾನವರನು ಕಾಯೋ ಮೌನಿ ಧ್ಯಾನಗಮ್ಯ 1 ನಾಗಕೂರ್ಮ ದೇವದತ್ತ ಕೃಕಳ ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ ಭೋಗಗಳೀವ ಸುಶಕ್ತಾ ತಲೆ ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ ಜಾಗುಮಾಡದೆ ನಿಜ ಭಾಗವತರೊಳಿಡೊ ಮೈಗಣ್ಣಪದನಾಳ್ದ 2 ಮೂರುಕೋಟಿ ರೂಪಧರನೆ ಲೋಕ ಧಾರಕ ಲಾವಣ್ಯಕರನೆ ಸರ್ವ ಪ್ರೇರಕ ಭಾರತಿವರನೆ ತ್ರಿಪು ರಾರಿಗೆ ವಜ್ರಪಂಜರನೆ ಆಹ ನೀರಜ ಜಾಂಡದಿ ಮೂರೇಳು ಸಾವಿರ ದಾರು ನೂರು ಜಪ ಬೇರೆ ಬೇರೆ ಮಾಳ್ಪ 3 ಆಖಣಾಶ್ಮ ಸಮಚರಣ ಪದ್ಮ ಲೇಖರ ಮಸ್ತಕಾಭರಣ ಕಲ್ಪ ಶಾಖೆಯಂತೆ ಅತಿಕರುಣಾದಿಂದ ಈ ಖಂಡದೊಳು ಮಿಥ್ಯಾವರಣ ಆಹಾ ನೀ ಖಂಡಿಸಿದಿ ದಂಡ ಮೇಖಲ ಭೂಷಣ ಆಖುವಾಹನಪಿತ ಆಖಂಡಲರ್ಚಿತ 4 ಶ್ರೀವಲ್ಲಭಗೆ ಪ್ರತಿಬಿಂಬನಾಗಿ ಜೀವವೇದ ಕಾಲಸ್ತಂಭಗತ ಆವಾಗ ಹರಿರೂಪ ಕಾಂಬ ಶಕ್ತ ನೀ ಒಬ್ಬನಹುದೋ ನಾನೆಂಬೆ ಆಹಾ ವಿಭವ ಜಗ ನಿತ್ಯ 5 ದಕ್ಷಿಣಾಕ್ಷಿಗತ ವತ್ಸಾ ರೂಪಿ ದಕ್ಷನಹುದೋ ಪರಮೋಚ್ಚಾ ಚಾರು ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ ಪೇಕ್ಷರಹಿತನೆ ಸ್ವೇಚ್ಛಾ ಆಹಾ ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು 6 ಮೂಲೇಶನಂಘ್ರಿ ಸರೋಜ ಭೃಂಗ ಏಳೇಳು ಲೋಕಾಧಿರಾಜಾ ಇಪ್ಪ ತ್ತೇಳು ರೂಪನೆ ರವಿತೇಜಾ ಲೋಕ ಪಾಲಕರಾಳ್ವ ಮಹೋಜಾ ಆಹಾ ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ ಪಾಳು ಭಕ್ತಿ ಜ್ಞಾನವಾಲಯ ಕರುಣಿಸು 7 ಅಧಿಭೂತ ಅಧ್ಯಾತ್ಮಗತನೇ ವಿಮಲ ಅಧಿದೈವರೊಳು ಪ್ರವಿತತನೆ ಕಲಿ ವದನದಿ ನಿಲಿಸೋ ಮಾರುತನೆ ಆಹಾ ಬದರಿಕಾಶ್ರಮದೊಳು ಹದಿನಾರು ಸಾವಿರ ಸನ್ನುತ 8 ಮಾತರಿಶ್ವ ಮಹಾಮಹಿಮ ಸರ್ವ ಚೇತನ ಹೃದ್ಗತ ಹನುಮ ಭೀಮ ಭೂತಳದೊಳು ಮಧ್ವ ನಾಮಾದಿಂದ ಜಾತನಾಗಿ ಜಿತಕಾಮಾ ಆಹಾ ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ ಸೀತಾರಮಣ ಜಗನ್ನಾಥ ವಿಠ್ಠಲ ದೂತ 9
--------------
ಜಗನ್ನಾಥದಾಸರು
ಬಾರೈಯ್ಯಾ ಗೋವಿಂದಾ | ಕೀರ್ತನೆಗೆ ಮುಕುಂದಾ | ಬೀರುತ ನಿಮ್ಮ ಮಹಿಮೆ ಸ್ವಾನಂದ ಪುರದಿಂದಾ ಪ ಕೋಂಡಾಡುವಂತೆ ಕೀರ್ತಿ ನೀಡಬೇಕು ನಿಜಸ್ಪೂರ್ತಿ | ಮಂಡೀಸಿ ಭಕ್ತರಂಗಾ ಹೇಳುವೆ ನಿಮ್ಮ ವಾರ್ತೆ 1 ವೈಕುಂಠ ಯೋಗಿವರಿಯಾ ಸ್ಥಳಸುರ ಮುನಿರಾಯಾ | ನೀ ಕರಿಸಿ ಪಾಡುವಲ್ಲಿ ಇಹನೆಂದೆ ನಿಶ್ಚಯಾ 2 ಕಂದನ ತೊದಲು ಮಾತಾ ಕೇಳಿ ಹಿಗ್ಗುವಂತೆ ಮಾತಾ | ತಂದೆ ಮಹಿಪತಿ - ಸ್ವಾಮಿ ಬಲವಾಗೋ ಶ್ರೀ ಕಾಂತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು