ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು