ಒಟ್ಟು 22 ಕಡೆಗಳಲ್ಲಿ , 15 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಿಳ ಭುವನದೊಳು ನೀನೆವೊ ಸುಹೃದಯದಲಿ ಸಾಕ್ಷಾತ ಸದ್ಗುರು ನೀ ಸುಲಭವೋ ಧ್ರುವ ನಿಮ್ಮದೇ ಹೊಳಹೋ ನಿಮ್ಮದೆ ಸುಳಿವ್ಹು ನಿಮ್ಮದೇ ಬಲವೊ ನಿಮ್ಮ ದಯದೊಲವೊ 1 ಬಲುತಾನವೋ ಜುಮ್ಮು ಜುಮಗುಡುತಿದೆ ಝೇಂಕಾರವು ಸುಮ್ಮನೆ ಓಂಕಾರವೊ ಝಮ್ಮನೆ ಒಮ್ಮಿತಿಗ್ಹೆಳೆನಿಸುತಿರೆ ಬ್ರಹ್ಮಾನಂದದ ಘೋಷವೋ ನಿಮ್ಮದೆವೊ 2 ನಿಗಮಗೋಚರ ನಿಜವಸ್ತು ನೀನೆ ಭಗತರಿಗೆ ಸಹಕಾರವೊ ನಿಜ ನೀನೆವೋ ಸುಗಮ ಸುಪಥ ಸಜ್ಜನರಾನಂದ ಯೋಗಿಜನರನುಕೂಲವೋ ಘನ ನೀನೆವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ ಧ್ರುವ ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1 ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2 ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ. ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1 ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2 ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3 ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4 ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಕೃಷ್ಣವೇಣಿ | ಜಗಪಾವನೀ | ಜಯಕರುಣಿ ಭಯಹರಿಣಿ ಭವತಾರಿಣಿ ಪ ಮಾಬಳೇಶ್ವರನ ಸುಜಟಾ ಭಾಗದಲಿ ಪದ್ಮ | ನಾಭನಂಶದಿ ಬಂದು ಶೋಭಿಸುತಲಿ | ಈ ಭುವನಜನರ ಮನದಾಭೀಷ್ಟಮಂ ಕೊಡಲು | ತಾ ಭರದಿ ನದಿರೂಪನಾಗಿ ಪ್ರವಹಿಸಿದೆ 1 ನಿನ್ನೆಡೆಗೆ ನಡೆತಂದು ನಿನ್ನ ಜಲ ವೀಕ್ಷಿಸುತ | ನಿನ್ನ ಘೋಷವ ಕೇಳಿ ತನ್ನ ಕರದಿ | ನಿನ್ನ ಸ್ಪರ್ಶನ ಅಚಮನ ಮಾರ್ಜನದಿಂದ | ತನುಮನೇಂದ್ರಿಯಗಳು ಪಾವನವಾದವು 2 ಪೊಡವಿಯೊಳಧಿಕ ತೀರ್ಥ ತಡಿಯಗ್ರಾಮವೇ ಕ್ಷೇತ್ರ | ಸುರರು | ಒಡಲೊಳಿಹ ಜಲಚರಗಳೊಡನೆ ಗತಿಸಾಧಕರು | ನುಡಿವ ಪಕ್ಷಿಗಳು ಸಲೆ ಗಿಡಮರಗಳು 3 ಸಾಗಿಸುವ ಕರ್ಮೇದ್ರಿ ತ್ಯಾಸದ್ಧರ್ಮದಿಂ | ಯೋಗ ಅಷ್ಟಾಂಗದಿಂ ಯಾಗದಿಂದ | ಭೋಗಿಸುವ ಪುಣ್ಯವನು ರಾಗದಿಂ ತೀರದಿಹ | ಯೋಗಿಜನಕೀವೆ ತಾನೀಗ ದಯದಿ 4 ಬಿಂದುಮಾತ್ರವೇ ಬೀಳಲೊಂದು ಕಾಯದಿ ಅಘದ | ವೃಂದ ನಾಶನವಹುದು ಮಿಂದಡವನ | ಛಂದಮಂ ಬಣ್ಣಿಸುವದಿಂದು ತಿಳಿಯದು ಎನುತ | ತಂದೆ ಮಹೀಪತಿ ಜ ಕರದ್ವಂದ್ವ ಮುಗಿಯೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಧ್ರುವ ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ ಯೋಗಿಜನರ ನಿಜಧನ ಆಗುದು ಸ್ವಾಧೀನ 1 ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ 2 ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿದೆ ಕುಮಾರ ತವ ಪಾದಾಂಬುಜವ ಧೀರಾ ಪ ಶ್ರೀ ಶಂಭು ಸುಕುಮಾರ ಅ.ಪ ಯೋಗಿಜನವಂದ್ಯ ಸದ್ಗುಣ ಸಾಗರಾನಂದ ನಿರುಪಮ ರಾಗ ಲೋಭವ ತ್ಯಾಗಗೈದಿಹ ಶ್ರೀ ಗಿರಿಜೆಕಂದಾ 1 ಶಕ್ತಿ ಮೊದಲಾದ ಆಯುಧ ಹಸ್ತದೊಳು ಪಿಡಿದಾ ನಿರ್ಮಲ ಚಿತ್ತ ಶ್ರೀಧರ ಮಿತ್ರ ಪರಮ ಪವಿತ್ರ ಖಳ ಛೇದಾ 2 ವಾಸವಾರ್ಚಿತನೇ ಸರ್ವದಾ ದಾಸ ರಕ್ಷಕನೇ ರವಿಶತ ಭಾಸ ಚಂಪಕನಾಸ ಪಾವಂಜೇಶ ಷಟ್ಶಿರನೇ 3
--------------
ಬೆಳ್ಳೆ ದಾಸಪ್ಪಯ್ಯ
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ ದಾರಿಯೆನಗಿದೊಂದೇ ತೊರ್ಪದು ಸುಖನಿಧಿ ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ ಅನ್ನವಸ್ತ್ರಂಗಳಿಗಾಗಿ ದುಡಿವದೊಂದು ಚೆನ್ನ ಪುತ್ರರ ರಕ್ಷಣೆಯೊಂದೆಡೆ ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಪ್ರೇಮ ಬಾಂಧವರಾಗೆನ್ನನಪ್ಪಿಹರೋ ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ ಸಾಮಜವರದ ಸಲಹೆಂದು ಸಂತೋಷದಿ 2 ಭಾಗೀರತಿಪಿತ ಭಾಗವತಪ್ರೀತ ಯೋಗಿಜನಂಗಳೊಳತಿ ಹಿತನೇ ಸಾಗರಶಯನನೆ ಭೋಗಿಗಳ ಪುಣ್ಯನೆ ಬಾಗುವ ಶರಣರ ಬಹುಭಾಗ್ಯನೇ 3 ನಾನಿಲ್ಲಿಗೆ ಬಂದ ಕಾರಣ ಕಾಣೆನೋ ದೀನಪಾಲಕ ಕಾರ್ಯಮಾಡಿಸೋಯನ್ನಿಂ ಏನಾದರು ಮಾಡು ತಪ್ಪಹೊರಿಸಬೇಡ ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4
--------------
ಶಾಮಶರ್ಮರು
ಪರಮಪುರುಷ ಪಾಲಿಪುದೈ ಸರಸಿಜಾಕ್ಷ ಸರ್ವರಕ್ಷ ಪ ಮಗುವಾದ ಧ್ರುವನು ಅಗಣಿತಗುಣ ನಿನ್ನನು ಹಗಲಿರುಳೂ ಮೃದುಪದವಂ ಬಿಗಿದಪ್ಪುತ ಧ್ಯಾನಿಸೆ 1 ಯೋಗಿಜನಾನಂದಕನೆ ಬೇಗದಿ ಮೈದೋರುತಲಿ ಭಾಗವತಪ್ರಿಯಪದವಂ ರಾಗದಿತ್ತೆ ಜಾಜೀಶ 2
--------------
ಶಾಮಶರ್ಮರು
ಪ್ರಾರ್ಥಿಸುವೆ ರಘುನಾಥತೀರ್ಥರ ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ ಸಾರ್ಥಕವಾಗಲು ಪಾರ್ಥಿವ ದೇಹವು ಜಗದಲಿ ಕೀರ್ತಿಗಳಿಸಿದವರ ಅ.ಪ ನೇದೃಶಂ ಸ್ಥಲಿಮಲಂ ಶಮಲಘ್ನಂ ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ ನಾಸ್ತಿ ವಿಷ್ಣುಂ ಸದೃಶಂ ನನುದೈವಂ ಸತ್ಯ ವಚನಗಳಿವೆಂದು ಸೂಚಿಸುತ ಆಸ್ತಿಕ ಜನಮನ ರಂಜಕ ತ್ರಿಮಕುಟ ಕ್ಷೇತ್ರನಿವಾಸ ಪವಿತ್ರತಮ ಚರಿತರ 1 ವ್ಯಾಸರಾಜ ಗುರುವರ್ಯ ರಚಿತ ತಾ ತ್ಪರ್ಯ ಚಂದ್ರಿಕಾ ಗ್ರಂಥವನು ವಾಸುದೇವ ನರಹರ್ಯನುಗ್ರಹದಿ ಉರ್ವರಿತವ ವಿರಚಿಸಿ ಮೆರೆದ ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರ ಪರಾವತಾರರ 2 ರಾಗ ದ್ವೇಷಗಳ ತೊರೆಯುತ ತ ನ್ನನು ರಾಗದಿಂದ ಭಜಿಸುವ ಜನಕೆ ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ ಸಾಧು ಭೋಗಗಳೀವ ಯೋಗಿಜನ ಮನೋನಯನ ಪ್ರಸನ್ನ ಶ್ರೀ ರಾಘವೇಂದ್ರರಪರಾವತಾರರ 3
--------------
ವಿದ್ಯಾಪ್ರಸನ್ನತೀರ್ಥರು
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ ಸದಯ ಹೃದಯರಾದ ಸಂಗದೊಳಗೆ ನೀನು ಬೆರೆದು ಪ --ಕರ್ತನಾದ ದೇವ ಸದ್ಪಿಲಾಸನಾ ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ ಭಕುತಿಯಿಂದ ಕ--------ಭಕ್ತ ಜನರಕೂಡಿ 1 ಯೋಗಿಜನರ ಹೃದಯದೊಳು ನಿಖರವಾಗಿಇರುವ ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ ಸಾಗರಾನಸುತಿಯರಾಳ್ವ ಸಾರ್ವಭೌಮನ ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ 2 ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ ಶಿಷ್ಟ ಜನರ ಪಾದ----------ಯಾಗೋ ನೀ ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ 3
--------------
ಹೆನ್ನೆರಂಗದಾಸರು
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್
ಶಂಕರ ಗುರುವರ ಮಹದೇವ ಭವ- ಸಂಕಟ ಪರಿಹರಿಸಯ್ಯ ಶಿವ ಪ. ಸಂಕಲ್ಪ ವಿಕಲ್ಪಮನೋನಿಯಾಮಕ ಕಿಂಕರಜನಸಂಜೀವ ಅ.ಪ. ಭಾಗವತರರಸ ಭಾಗೀರಥೀಧರ ಬಾಗುವೆ ಶಿರ ಶರಣಾಗುವೆ ಹರ ಶ್ರೀ ಗೌರೀವರ ಯೋಗಿಜನೋದ್ಧರ ಸಾಗರಗುಣಗಂಭೀರ 1 ರಾಯ ಲಕ್ಷ್ಮೀನಾರಾಯಣ ಭಕ್ತಿಪ- ರಾಯಣ ತ್ರಿನಯನ ಪುರಹನ ಕಾಯಜಮಥನ ಮುನೀಂದ್ರ ಸಿದ್ಧಜನ- ಗೇಯಸ್ವರೂಪೇಶಾನ 2
--------------
ತುಪಾಕಿ ವೆಂಕಟರಮಣಾಚಾರ್ಯ