ಪಾದ ಮುಖ್ಯ ಪ್ರಾಣಾ
ನಂಬಿದೇ ನಿನ್ನಯ ಪಾದಾ
ಡಂಬರ ತೊಲಗಿಸಿ
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ
ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿಹಂಸಮಂತ್ರ ತಪ್ಪದೆ ದಿನದಿನ
ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ
ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ
ವಪ್ಪಂತೆ ಕರುಣಿಸೊ
ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ 1
ಹತ್ತೇಳು ಎರಡಾಯುತ ನಾಡಿಯೊಳು
ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ
ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ
ತ್ತಮನೆ ಸತ್ ಚಿತ್ ಎನಗೆ ಕೊಡು
ಉತ್ತರ ಧರಿಸೋ 2
ಅಂತರಂಗದಿ ಉಸುರಾ ಹೊರಗೆ ಬಿಟ್ಟು
ಅಂತರಂಗಕ್ಕೆ ಸೇರುವ ಪಂಥದೊಳು ನೀನೆ
ನಿಂತು ನಾನಾಬಗೆ ತಂತು ನಡಿಸುವ
ಹೊಂತಕಾರಿ ಗುಣವಂತ ಬಲಾಢ್ಯ 3
ಪಂಚಪರಣ ರೂಪನೆ ಸತ್ವ ಕಾಯಾ
ಪಂಚೇಂದ್ರಿಯಗಳ ಲೋಪನೆ
ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ
ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ
ಅಂಚಗಂಚಿಗೆ ಪರಪಂಚವೆ ಓಡಿಸಿ
ಪಂಚವಕ್ತ್ರ ಹರಿ ಮಂಚದ ಗುರುವೇ 4
ಯೋಗಾಸನದೊಳಿಪ್ಪ ಯಂತ್ರೋದ್ಧಾರಾ
ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ
ಯೋಗಿಗೊಲಿದ ವ್ಯಾಸಾ ಶ್ರೀ
ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ
ಜಾಗರ ಮೂರುತಿ5