ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಗಣಪತಿ - ಸರಸ್ವತಿಯರು ಶ್ರೀ ಗಣಪತಿ ಓಂ ನಮೋನಮೋ | ಜಯ ಶ್ರೀ ಗಣಪತಿ ಓಂ ನಮೋನಮೋ ಪ ಅಗಜಾವರಸುತ | ನಿಗಮಾಗಮನುತ | ಯೋಗಿಗಳರಸನೆ | ಭಾಗವತರ ಪ್ರೀಯ ಅ.ಪ ಶುಭ | ಲಗ್ನಪ್ರದಾಯಕ | ಭಗ್ನದುರಿತ ನಿಜ | ಮಗ್ನ ಪ್ರಭಾಕರ1 ವಿದ್ಯಪ್ರದಾಯಕ | ಬುದ್ಧಿ ಪ್ರದಾಯಕ | ಸಿದ್ಧಿಸಂಪದ ಆಯುರ್ ವೃದ್ಧಿ ಪ್ರದಾಯಕ 2 ಶಕ್ತಿ ಪ್ರದಾಯಕ | ಸೌಖ್ಯಪ್ರದಾಯಕ | ಭಕ್ತಿದಾಯಕ ನಿಜ | ಮುಕ್ತಿದಾಯಕ ನಮೋ 3 ಋಣಬಂಧಂಗಳ | ಗುಣದಿಂ ಬಿಡಿಸುತ್ತ | ತ್ರಿಣಯಕುಮಾರನೆ | ಪ್ರಣತನ ಪಾಲಿಸೋ 4 ಭವ ಭಯ ಹರ | ತ್ರೈಭುವನಜನಾರ್ಚಿತ | ಕವಿಸುತಲೋಲನೆ | ಶಿವಸದಾನಂದನೆ 5
--------------
ಸದಾನಂದರು
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ ಸ್ವಾಮಿ ನಿಂತು ಕಾಯೋ ಎನ್ನ ಪ. ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ. ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ ನಾಗಶಯನನೆ ಯೋಗಿಗಳರಸನೆ ಬೇಗದಿ ಬಂದು ಕಾಯೋ ಎನ್ನನು 1 ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ ವಾಸುದೇವ ನಿನ್ನ ಲೇಸು ಕರುಣವ ತೋರಿ ನಿನ್ನ ದಾಸರ ಸಂಗದೊಳು ಇರಿಸೋ ಎನ್ನ 2 ರಾಮ ರಾಮ ಎಂಬೋ ನಿನ್ನ ನಾಮನೇಮದಿ ನುಡಿಸೆನೆಗೆ ರಮಾವಲ್ಲಭವಿಠಲ ಭಾಮೆಯರರಸನೆ ಪ್ರೇಮವ ತೋರೋ 3
--------------
ಸರಸಾಬಾಯಿ
ಪಾಲಿಸು ದಯಾಕರನೆ ನೀಲಮೇಘಶ್ಯಾಮ ಪಾಲಿಸು ದಯಾಕರನೆ ಪ ಪಾಲಿಸು ಎನ್ನ ಕರುಣಾಳು ವ್ಯಾಲಮಾಲ ಬಾಲನ ದಯದಿಂ ಮಾಲತುಲಸೀವನ ಅ.ಪ ಬಂದುಬಿದ್ದೆನಯ್ಯ ಸಂಸಾರ ದಂದುಗ ವೆಂಬ ಮಾಯಬಲೆಯೊಳು ನೊಂದು ಕಾಯ ಬಂಧನಿವಾರಿಸಯ್ಯ ನೊಂದಿಸಿ ಅರ್ಥವ ತಂದು ಸತಿಯು ಸುತ ರೆಂದು ಸಲಹಿ ಯಮ ಬಂಧಕೀಡಾದೆನು ಮುಂದೆ ಇಂಥ ಬವಣಿಂದೆ ತಾರದೆನ್ನ 1 ರಿಣವೆಂಬ ಸೂತಕಿದು ಎನ್ನಗೆ ಘನವಾಗಿ ಕಾಡುವುದು ಇನ್ನಿದು ಜನು ಜನುಮದಿ ಬಿಡದು ಬೆನ್ನತ್ತಿ ಬರ್ಪುದು ಗನ್ನಗತಕನಾಗಿನ್ನು ಭವಭವಂಗ ಬನ್ನ ಬಡಲಿಬೇಕೊ ಮನ್ನಿಸಿ ದಯದಿಂ ನಿನ್ನ ಕೃಪೋದಕ ವನ್ನು ತಳೆದು ಬೇಗೆನ್ನ ಶುದ್ಧಮಾಡು 2 ಆಗಿಹೋದದ್ದ್ಹೋಯ್ತು ಮುಂದಿಹ್ಯ ಭೋಗ ಬೇಡ ಜಗತ್ತು ಪಾಲನೆ ಬಾಗುವೆ ಮನವರಿತು ಚರಣಕೆ ಶಿರವಿತ್ತು ಭೋಗಭಾಗ್ಯದಾಸೆ ನೀಗಿಸಿ ಈ ಭವ ಸಾಗರ ದಾಂಟಿಸು ಯೋಗಿಗಳರಸನೆ ನಾಗಶಯನ ದಯಮಾಡಿ ದಾಸನ ದು ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3
--------------
ರಾಮದಾಸರು