ಎದ್ದು ನಿಂತ ಖಳರ ಕೃತಾಂತಹೊದ್ದಿದವರ ಪೊರೆವ ಧವಳಗಂಗೆ ಹನುಮಂತಪ.
ಕಪಟ ದಶಮುಖನ ಮದಭಂಜನ ಮಾಳ್ಪೆನೆಂದೆದ್ದು ನಿಂತಸಂಜೀವನವ ತಂದು ಕಪಿಗಳ ಕಾಯ್ದಆಂಜನೆಯ ತನಯ ತಾನೆದ್ದು ನಿಂತ 1
ಗುದ್ದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕಮರ್ದನ ಮಹಾಮಹಿಮನೆದ್ದು ನಿಂತಯುದ್ಧದಲಿ ರಘುಪತಿಯ ಹೊತ್ತು ಭಕುತಿಯ ತೋರ್ದಶುದ್ಧಸ್ವಭಾವ ತಾನೆದ್ದು ನಿಂತ2
ರಾಗಗಳ ಮೇಳೈಸಿ ಹಯವದನನೊಲಿಸಿಯೋಗಿಗಳನುದ್ಧರಿಸಲೆಂದೆದ್ದು ನಿಂತಈಗ ಧರೆಯೊಳು ಸುಜನರ ಮನೋಭೀಷ್ಟಗಳವೇಗದಲಿ ಕೊಡುವೆನೆಂದೆದ್ದು ನಿಂತ3