ಹೊನ್ನು ಹೆಣ್ಣು ಮಣ್ಣು ಮೂರನು ಬಿಟ್ಟು ಚರಿಸುವವ ಯೋಗಿ
ಬಣ್ಣ ಸಣ್ಣ ಸರ್ವಾಭರಣವಿಟ್ಟು ಮೆರೆವನು ಬೋಗಿ ಪ
ನಾರಿಯರದನು ಕಂಡು ಥೂ ಎಂದುಗುಳಿ ತೊಲಗುವಯೋಗಿ
ಭೋಗಿ ಘೋರ ತಪವ ಚರಿಸಿ ಅಡವಿಸೇರಿ ಕೊಂಬನು ಯೋಗಿ
ಭೋಗಿ 1
ಮಾಯೆಯಳಿದು ವಸ್ತುವರಿತು ಚರಿಸುತಿಹನು ಯೋಗಿ
ಜಾಯೆ ಸುತರ ಸಿರಿಯ ನೆಚ್ಚಿ ಹಿಗ್ಗುತಿಹನು ಭೋಗಿ
ಬಾಯ ಬಿಡದೆ ಮೌನಿಯಾಗಿ ಜಪಿಸುತಿಹನು ಯೋಗಿ
ಭೋಗಿ 2
ಕುಲದಲಾವನೆಂದು ಜನಕೆ ತಿಳಿಯ ಬಾರದವನು ಯೋಗಿ
ಹೊಳಲಿನೊಳಗೆ ಸುಳಿದು ಸುಳಿದು ನಲಿಯುತಿಹನು ಭೋಗಿ
ಚಲನ ಭವನ ಕೋಣೆ ಲಕ್ಷ್ಮೀರಮಣನು ತಾನೆಯಾಗಿ
ಒಳಗು ಹೊರಗು ಬೆಳಗುತಿಹನು ಯೋಗಾನಂದನಾಗಿ 3