ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸೋ ಎಲೆ ಮಾನವಾ ಮಾಣದೆ ಸದಾ ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ ಧರಣಿಯಂದದಿ ಕ್ಷಮಾಭರಿತ ಮಂಗಲದಾತ | ಶರಧಿಯಂದದಿ ದಯಾಗುಣಶೀಲರೋ | ಸುರ ನದಿಯಂದದಿ ದುರಿತಪರಿಹಾರಕರು | ತರಣಿ ಭಾರ ತಿಮಿರನೋಡಿಸುವರೋ 1 ಈಶನಂದದಿ ಜಿತಪೂಶರವರ | ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು | ಸಾಸಿರ ಮುಖನಂತೆ ಯೋಗಸುಸಾಧಕರು ಭೇಶನಂದದಿ ಸುಧಾಕರರಾಗಿ ತೋರ್ಪರೋ 2 ಶಾಮಸುಂದರವಿಠಲಸ್ವಾಮಿ ಉಪಾಸನೆ | ನೇಮದಿಂದಲಿ ಸತತಗೈಯುತಲಿ ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು 3
--------------
ಶಾಮಸುಂದರ ವಿಠಲ