ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ರಜ ವಿಹಾರ ಜಯ ಮುರಾರೆ ಪ ಭಜಿಪ ಯೋಗವೇನು ಸುಕೃತವೊ ಅ.ಪ ಮುರಳಿನಾದ ಸುಧೆಯ ಧಾರೆ ಹರಿದುದೆನ್ನ ಶ್ರವಣದಲ್ಲಿ ಬೆರೆತೆ ನಿನ್ನ ಮರೆತೆ ಮೈಯ್ಯ ಹಿರಿಯದಾಯ್ತು ಜನುಮವಿಂದು 1 ಮೃದುಲಹಾಸ ಮಧುರಭಾಷ ವದನ ಸೊಬಗ ನೋಡಿದೆನೋ ಶ್ರೀಶ ಸದನದಲಿ ಮನೋಹರ ವಿಲಾಸ ಹೃದಯ ಕಮಲಕಾದುದು ವಿಕಾಸ 2 ಭೋಕ್ತ ನಿನಗೆ ಭಕುತಿ ಕುಸುಮವೆನ್ನ ಸೇವೆ ಸುಖವನೀಪರಿ ನಿತ್ಯಗೊಳಿಸೊ ಮುಕುತಿಯಿರಲಿ ಶ್ರೀ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು