ಮರೆವುದೆಂತು ನಿನ್ನ ಪರಮ ದಯವ ಕರುಣಾವಾರಿಧೇ ಪ
ಅರಿಯದ ಅಜ್ಞಾನಿ ಎನ್ನ ಹಿರಿಯನೆನಿಸಿ ಪೊರೆದ ಬಗೆಯ ಅ.ಪ
ಜ್ಞಾನಿಗೆ ಲಭ್ಯನೆಂದು ನಿನ್ನ ಮಾನತತಿಯು ಪೊಗಳುತಿರಲು
ಜ್ಞಾನವೀಯದಿರಲು ನಿನ್ನ ಜ್ಞಾನಿಜನಗಳೇನೆನುವರೋ 1
ರಾಗ ದ್ವೇಷದಿಂದ ಶಿರವ ಬಾಗದಿದ್ದ ಎನ್ನ ದುರಿತ
ನೀಗಿ ದಿವ್ಯಯೋಗವೀಯಲು ತ್ಯಾಗ ನಿನ್ನದು ಯೋಗವೆನ್ನದು 2
ಮಡುವಿನಲ್ಲಿ ಬಿದ್ದು ಸುಳಿಯ ಹೊಡೆತದಿಂದ ಮುಳುಗುತಿರಲು
ದಡಕೆ ತಂದು ರಕ್ಷಿಸಿದ ಎನ್ನೊಡೆಯ ವರ ಪ್ರಸನ್ನ ಮೂರುತೆ 3