ಇದೇವೆ ಗುರು ಘನ ಮಹಿಮೆ ಧ್ರುವ
ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ
ಹೊಳೆಯುತಿಹ್ಯದು ಅನುದಿನ
ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ
ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1
ಮಹಿಮರು ಮನಿಮನಿಗಿಲ್ಲ
ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ
ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ
ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2
ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ
ಸರ್ವರಿಗಾವುದಲ್ಲ ಪೂರ್ವಾ
ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ
ಸರ್ವಮಯವೆಲ್ಲ 3