ಶರಣ ನೀನೆಲೊ ನರಹರಿ
ಶರಣನೀನೆಲೊ ನರಹರಿ ಚರಣ ಪ
ಶರಣ ನೀನಿರ್ದು ಮರವೆಗೂಡಿ
ಜರಾಮರಣ ಪಡೆವರೇನೊ ಅ,ಪ
ಯೋಗಮಾರ್ಗ ವಹಿಸಿ ನಿಜವಾದ
ಭಾಗವತರ ಒಲಿಸಿ
ರಾಗರಹಿತನಾಗಿ ನೀಗದ ಸಂಸಾರ
ಭೋಗ ತ್ಯಜಿಸಿ ಭವರೋಗ ಗೆಲಿಯುವಂಥ 1
ಮಿಥ್ಯೆ ಮಾಯ ನೀಗಿ ಸತತ ನೀ
ಸತ್ಯ ಜನಕೆ ಬಾಗಿ
ಸತ್ಯಸಂಧನಾಗಿ ಚಿತ್ತಜತಾತನ
ಭಕ್ತನೆನಿಸಿ ಯಮ ಮೃತ್ಯುಗೆಲಿಯುವಂಥ 2
ಪಾಮರತ್ವ ತೊರೆದು ನಿಜವಾದ
ನೇಮನಿತ್ಯ ಪಿಡಿದು
ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ
ನಾಮ ಭಜಿಸಿ ಮುಕ್ತಿ ಸಾಮ್ರಾಜ್ಯಪಡೆಯೆಲೊ 3