ತುಂಗಾತೀರ ಪ್ರಭಾಕರ ಶೃಂಗಾರ ಶ್ರೀ
ರಾಘವೇಂದ್ರ ಪ್ರಭು [ಮಾ ಮಂದಾರ] ಪ
ತುಂಗ ಕೃಪಾಕರ ಕಾಮಿತದಾತ
[ಸಂಗ]ವೆಂಕಟೇಶ ನಿರಂತರ ಮೋದಿತ ಅ.ಪ
ಯೋಗದಂಡಧರ [ವರ] ಸಂಭಾವಿತ
ತ್ಯಾಗಾದಿ ಸುಗುಣ ನಿರುಪಮ ಶಾಂತ
ಮಾರ್ಗ ದ್ವೈತ ನಿರೂಪಣ ಮಹಾನಂದ
[ಶ್ರೀ]ಗುಣೋಲ್ಲಾಸಿತ ವಿರಾಜಿತ 1
ಆಗಮಾದಿ ವಿಧಿಸೂತ್ರ ವಿಚಾರಿತ
ರಾಗ ರಾಗಾಂಗರಾಗಭೂಷಿತ
ಯಾಗ ಯಜ್ಞ ಭೇದ ನಿರೂಪಿತ
ಮಾಂಗಿರೀಶ ಹರಿಪದ ಪ್ರಪೂಜಿತ 2