(ಋ) ಕ್ಷೇತ್ರವರ್ಣನೆ
(1) ಮೇಲುಕೋಟೆ
ಯತಿರಾಜ ಸಂಪತ್ಕುಮಾರಾ ಸ
ತ್ಕøತದೊಳಗಿರಿಸೆನ್ನ ಧೀರಾ ಪ
ಸತತ ಶ್ರೀಮದ್ವೈಷ್ಣವರನಾ
ನುತಿಸುವಾನಂದ ದೊಳಗಿರಿಸೈ
ಪತಿತಪಾವನ ಕಂಕಣಾಧ್ರುತ
ಕ್ಷಿತಿಯ ಪಾಲ ಮಹಾನುಭಾವನೆ 1
ನೋಡಲಿಚ್ಚೈಸಿ ನಾಂ ಬಂದೆ ನನ್ನ
ಮೂಢಾಕೃತದೊಳು ನಿಂದೆ
ಕೇಡುಗಳು ಬಂದೆನ್ನ ವಿಧ ವಿಧ ಬಾಧೆ
ಪಡಿಸುತ್ತಿರುವದಿದೆಕೊ
ನೋಡಿ ಸುಜನರ ಕೂಡಿ ಭಜನೆಯ
ಮಾಡುವೆನು ಶ್ರೀಮಾಧವಾಗ್ರಣಿ 2
ತುಲಶಿಮಣಿಹಾರ ಲೀಲಾ ಸ
ತ್ಫಲತಂತ್ರ ದಾಸಾನುಕೂಲಾ
ಕಾಲಕಲನಹುದೊ ಶ್ರೀಮನ್
ಬಾಲಬ್ರಹ್ಮಚಾರಿ ಮದ್ಗುರು
ಮೇಲುಕೋಟೆಯೊಳಿರುವೊ ನಿಜವರ
ಲೀಲಾಮಾನುಷವಿಗ್ರಹನೆ ನಿಜ
ಯತಿರಾಜ ಸಂಪತ್ಕುಮಾರಾ 3