ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು
ಚಿತ್ತದೊಳಾಗುವಾ ಮತ್ತ ಶಾಶ್ವತನು
ದತ್ತ ಉಳ್ಳವನ ಹತ್ತಿಲೇ ಈಹನು
ವೃತ್ತಿ ಒಂದಾದರೆ ಹಸ್ತಗುಡುವನು 1
ಎತ್ತ ನೋಡಿದರೆ ಮೊತ್ತವಾಗಿಹ ತಾಂ
ಉತ್ತಮೊತ್ತಮತಾನೆತ್ತುತಾ ಈತಾ
ಅತ್ತಲಿತ್ತಾಗದೆ ಹತ್ತಿಲೆ ಸೂಸುತ
ಮುತ್ತಿನಂತಿಹ್ವನು ನೆಲಿಲೆ ಭಾಸುತಾ 2
ದತ್ತನೆಂದೆನ್ನಲು ಕತ್ತಲೆಣ್ಯೋಗುದು
ಮೃತ್ಯು ಅಂಜುತಲಿ ಭೃತ್ಯನಾಗಿಹುದು
ಉತ್ತಮರಿಗೆ ತಾ ಸತ್ಯ ಭಾಸುದು 3
ಒತ್ತಿ ಉನ್ಮನಿಯಾವಸ್ಥಿ ಯೊಳಾಡುವದು
ಸ್ವಸ್ತಮನಾದರೆ ವಸ್ತು ಕೈಗೂಡುದು
ಬಿತ್ತಿ ಮನ ಗುರುಭಕ್ತಿ ಮಾಡುವದು
ದತ್ತ ತನ್ನೊಳು ತಾನೆವೆ ಭಾಸುವದು 4
ದತ್ತ ದತ್ತೆಂದು ತಾ ಅರ್ತ ಮಹಿಪತಿಯ
ಬೆರ್ತ ನೋಡಿದ ಮನವು ಸುಮೂರ್ತಿಯು
ಮರ್ತದೊಳಿದುವೆ ಸುಖವಿಶ್ರಾಂತಿಯು
ಮರ್ತುಹೊಗುವದು ಮಾಯದ ಭ್ರಾಂತಿಯು 5