ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊರೆಯಲು ಸರ್ವಸ್ವವನು ನುಂಗಿತು ಪ ಚಿನ್ನ ಚಿಗುರು ಕಂಚು ತಾಮ್ರವನು ನುಂಗಿತು ಮಣಿ ಮುರುಗಳ ನುಂಗಿತು ಬಣ್ಣ ಬಂಗಾರವ ನುಂಗಿತು ಹೊಟ್ಟೆಗೆ ಸಣ್ಣ ಹೆಣ್ಮಕ್ಕಳ ನೆರೆ ನುಂಗಿತು 1 ಮಡದಿ ಮಕ್ಕಳ ಮೇಲಣಾಸೆಯ ನುಂಗಿತು ಜಡದಿ ಜನರ ಸತ್ವಗಳ ನುಂಗಿತು ಬಡವ ಬಲ್ಲಿದರನು ಬಿಡದಪ್ಪಿ ನುಂಗಿತು ಪೊಡವಿ ಯೊಳಗಿರುವಾಸೆಯನು ನುಂಗಿತು 2 ಎಡಬಲದವ ರೊಡವೆಯ ಕದ್ದು ನುಂಗಿತು ಕಡಕಟ್ಟ ತಂದು ಕೊಡದೆ ನುಂಗಿತು ಕೊಡುವ ಬಿಡುವ ಧನಿಯರ ಕೈಯ ನುಂಗಿತು ಕಡಲೋಭಿ ವಿತ್ತವನೆಲ್ಲ ನುಂಗಿತು 3 ದುಡ್ಡಿಗೆ ಪಾವಕ್ಕಿಯ ತಂದು ರಾಗಿಯ ದೊಡ್ಡಂಬಲಿ ಕಾಸಿದರೆ ನುಂಗಿತು ಗುಡ್ಡದಂತವರೆಲ್ಲ ಮಣಿಗೆ ಮಂಡಿಸಿಕೊಂಡು ದೊಡ್ಡಪ್ಪಗಳಿಗೆಲ್ಲ ಸುರಿದುಂಡಿತು4 ಮುನ್ನ ಮಾಡಿದ ಹೊಲ ಮನೆಯನ್ನು ನುಂಗಿತು ಜನ್ನೆ ಆಕಳ ಮಹಿಷಿಯ ನುಂಗಿತು ಅನ್ನವೆ ನುಂಗಿತು ಜನರನ್ನು ಲಕ್ಷ್ಮಿಯನಾಳ್ದ ವನದಾಸರಿಂಗೊಲಿಯಿತು 5
--------------
ಕವಿ ಪರಮದೇವದಾಸರು