ನಿನ್ನ ಭಕ್ತರು ಬಹಳ ಬಲವಂತರಹುದೈ
ಜನ್ಮಜನ್ಮಕೂ ಚರಣಶರಣನ್ನ ಮಾಡೈ ಪ
ಹಾರಿದನು ಹನುಮಂತ ಕಡಲ ಕಾಲುವೆಯಂತೆ
ಸಾರಿ ಸೇತುವೆಯ ಕಟ್ಟಿ ನೀ ದಾಟಿದೇ
ಮಾರುತಿಯು ಬಲ್ಲಿದನು ಎಂದು ನಾಂಪೇಳಲೇ
ಸಾರಸಾಕ್ಷನೆ ಸಾಕ್ಷಿ ಯೇತಕೈ ಬೇರೆ 1
ಭೀಷ್ಮನನು ಬೆದರಿಸಲು ತೋರಚಾಪವ ತೊಟ್ಟ
ಸೂಕ್ಷ್ಮದಿಂಹಾರಿಸಿದ ಸಂಗರದಲವನು
ತೀಕ್ಷ್ಣಸಾಹಸಿಯಾತನೆಂದು ನೀಂತಿಳಿಯತೈ
ಶ್ರೇಷ್ಠ ಮಾರುತಿಕೈಯ ಪರಶುವಂ ಕೇಳು 2
ಶಬರ ಶಂಕರನೊಡನೆ ಕಾದಿ ಕಡೆಯಲಿ ಗೆಲ್ದು
ಪ್ರಬಲನೆನ್ನಿಸಿ ಪಾಶುಪತವನ್ನೆ ಪಡೆದಾ
ಪ್ರಭುವೆ ನಿನ್ನು ಪದೇಶ ಪಡೆದ ಪಾರ್ಥನ ಕೇಳು
ಸುಬಲರೈ ಜಾಜೀಶ ದಾಸರೀ ಜಗದಿ 3