ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಯವನಿತ್ತು ಕಾಯೊ ರಂಗಯ್ಯ ನಿನ್ನಡಿಗೆರಗುವೆನು ನಾನು ಪ ಭಾಷ್ಯಕಾರರಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಪತಿಯ ಪಾದಾರವಿಂದಕೆ ನಮಸ್ಕರಿಸಿ ಲಕ್ಷ್ಮೀಪತಿ ನಿಮ್ಮ ಕರಗಳ ಸ್ತುತಿಸಿ ಬೇಡುವೆ ನಾನು 1 ಮತ್ಸ್ಯಾವತಾರನಾಗಿ ವಾರಿಧಿಯೊಳಗಿರ್ಪ ದೈತ್ಯನ ಕೊಂದು ಹೆಚ್ಚಿನ ವೇದವ ಅಜನಿಗೆ ತಂದಿತ್ತೆ ಭಕ್ತವತ್ಸಲ ನಿಮ್ಮ ಕರಕಮಲಗಳಿಂದ 2 ದೇವದೈತ್ಯರ ಮಧ್ಯದೀ ವಾರಿಧಿಯನ್ನು ವೇಗದಿಂದಲೆ ಮಥಿಸೇ ಆವಸುರರು ಅಪಹರಿಸಿದ ಅಮೃತವ ಸಾಧುಜನಗಿತ್ತ ಆ ವಿನೋದದ ಕರಗಳಿಂದ 3 ಕ್ರೋಢರೂಪವ ಧರಿಸಿ ಹಿರಣ್ಯಾಕ್ಷನ ಕೋರೆಯಿಂದಲೆ ಕೊಂದು ಧಾರುಣಿಯನು ತಂದು ಆದಿಮಾನವಗಿತ್ತ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 4 ಕರುಳ ಬಗೆದ ವನಮಾಲೆಯ ಧರಿಸಿದೆ ಶ್ರೀಪರಮಪಾವನ ನಿಮ್ಮ ಕರುಣಹಸ್ತಗಳಿಂದ 5 ತಟ್ಟನೆ ಯಜ್ಞಶಾಲೆಗೆ ಬಂದು ದಾನವ ಪುಟ್ಟ ಕರಗಳಿಂದ ಅರ್ತಿಯಲಿ ಬೇಡಿದ 6 ಅಂದು ಕ್ಷತ್ರಿಯರ ಕುಲವ ಕೊಡಲಿ ಪಿಡಿದುದ್ದಂಡ ದಿಂದಲಿ ಕಡಿದು ತಂದೆಯ ನುಡಿ ಕೇಳಿ ತಾಯಿ ಶಿರವನರಿದೆ ಇಂದಿರಾಪತಿ ನಿಮ್ಮ ಆನಂದ ಕರದಿಂದ 7 ಶಶಿಮುಖಿ ಸೀತೆಗೋಸ್ಕರ ಧನುವನು ಮುರಿದ ಅಸಮಸಾಹಸ ನಿಮ್ಮ ಕುಶಲಹಸ್ತಗಳಿಂದ 8 ಘೋರ ಪ್ರಳಯಸುರನ ಸಂಹರಿಸಿದೆ ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ 9 ಮಧುರೆಯೊಳಗೆ ಜನಿಸಿ ಗೋಕುಲಕೈತಂದು ಲೀಲೆಯ ತೋರಿ ಮುದದಿಂದ ಪಾಲಬೆಣ್ಣೆ ಕದ್ದು ಗೋಪಿಯರಲ್ಲಿ ಪಿ ಡಿದೆಳೆದೆ ಉಡುರಾಜನನು ಶ್ರೀಕರದೊಳು 10 ಪತಿವ್ರತೆಯ ವ್ರತವ ಭಂಗವ ಮಾಡಿ ಚಪಳಚಾರನಾಗಿ ಅತಿಶಯವಾದ ರಾಕ್ಷಸರ ಸಂಹರಿಸಿದೆ ಪೃಥವಿ ಪಾಲಿಪ ನಿಮ್ಮ ಚತುರಹಸ್ತಗಳಿಂದ 11 ಕಲ್ಯ್ಕಾವತಾರನಾಗಿ ಕುದುರೆ ಏರಿ ಸಂಹರಿಸುತಲೆ ಬಹು ಮಲಕರಗಳಿಂದ ದೇವ ಪರಮಪುರುಷ 12 ಕಂದ ಧ್ರುವ ತಾನಡವಿಯಲಿ ನಿಂದು ತಪ ಮಾಡಲು ಚಂದದಿ ಮಾಡಲು ಬಂದು ಸೇವೆಯನಿತ್ತು ಮತಿಗಾಗಿ [ಅಂದು] ಶಂಖವನೊತ್ತಿದ ಕರದೊಳು 13 ಕಾಲ ಪಿಡಿಯೆ ಗಜೇಂದ್ರ ನಿಮ್ಮ ಸ್ತುತಿಸೆ ಚಕ್ರ ಬಂದ ಕರುಣಹಸ್ತಗಳಿಂದ 14 ಅಂದು ಸುಧಾಮ ತಾನು ಶ್ರೀಹರಿಯ ಮಂದಿರಕೆ ಬರಲು ಚಂದದಿಂದಲೆ ಆತಿಥ್ಯ ಮಾಡಿ ಅವ ಕೊಂಡ ಕರಗಳಿಂದ 15 ದುರುಳ ದುಶ್ಯಾಸನ ಸಭೆಯೊಳು ದ್ರೌಪದಿಯ ಸೀರೆಯೆಳೆಯು ತಿರುವಾಗ ಹಾ ಕೃಷ್ಣ ದ್ವಾರಕಾವಾಸ ಯೆಂದು ಮೊರೆಯಿಡೆ ಕೇಳಿ ಅಕ್ಷಯವೆನುತ ನೆಚ್ಚವನೆಚ್ಚ ಕರದೊಳು 16 ಗ್ರಾಸವ ಬೇಡಲು ಪರಮಪುರುಷ ನೀನೇ ಗತಿಯೆಂದು ದ್ರೌಪದಿ ಮೊರೆಯಿಡೆ ಅಕ್ಷಯವ ಮಾಡಿದ ಕರದೊಳು * 17 ಮಂದಮತಿಯು ಜ್ಞಾನವೂ ನಿಮ್ಮ ಮಹಿಮೆ ಒಂದು ತಿಳಿಯದು ಇಂದಿರೆ ರಮಣ ಶ್ರೀರಂಗನ ದಯದಿಂದ ವಂದಿಸಿ ಬೇಡಿದೆ ಆನಂದಕರಗಹಳನ್ನು 18 ವೇದಶಾಸ್ತ್ರಗಳನ್ನು ಅರಿಯದ ಪಾಮರಸ್ತ್ರೀಜನ್ಮವು ಕಾಮ ಕ್ರೋಧವು ಲೋಭ ಮೋಹದಿಂದಲೆ ಬಿಡಿಸಿ ನಿಮ್ಮ ಪಾದದೊಳಿರಿಸೆನ್ನ ಶ್ರೀನಿವಾಸನೆ ಅಭಯವನಿತ್ತು ಕಾಯೊ 19
--------------
ಯದುಗಿರಿಯಮ್ಮ
ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ಪ ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ 1 ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು 2 ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ 3
--------------
ಮೋಹನದಾಸರು
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ. ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1 ಭೃಂಗಕುಂತಳ ನೀಲಕೇಶ | ಹುಬ್ಬು | ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳವೀಳ್ಯ ಕರ್ಪೂರ | ಇಟ್ಟು | ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ 3 ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4 ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ವೈಜಯಂತಿ ಮಂಜರಹೀರ ಹಾರನ್ನ5 ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6 ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7 ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8 ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9 ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10 ಪಾದ | ಪಾಪ ಪಾದ | ಕಾಮ ಪಾದ | ಬಹು ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ11 ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸÀ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ 12 ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು 13 ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14 ನಿತ್ಯ | ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ 15
--------------
ವಿಜಯದಾಸ
ಯಾಕೆ ಕಷ್ಟ ಪಡುವೆ ನೀನು ಮಾಯಾ ಸಲಹು ನಮ್ಮಪ ಹಿರಿಯ ಮಗನು ಸರ್ವ ಜನರೊಳಿರುತ ಕಾಮಿಸುವನು ಜಗವ 1 ಮೊಮ್ಮಗನು ನಿನ್ನದಾಸಿಯಾ-ಜಗವ ಮೋಹಿಸುತ್ತಲಿರುವಳು 2 ನೀರೊಳಿರುತ ಮೋರೆ ಮುಚ್ಚಿಕೊರೆ ಮಸೆದು ಕಂಬದಿಂದ ಹಾರಿಯೆಳೆದು ಧಾರಿಣಿಯ ಧೀರ ನೃಪರನೆಲ್ಲಕೊಂದು 3 ಊರುಬಿಟ್ಟು ಸಾರಿ ವನವ ಜಾರನಾಗಿ ಭಂಗಪಡಿಸಿ ನಾರಿಯರನು ದಾರತೇಜಯೇರಿಮೆರೆದು ಬಾರಿ ಬಾರಿ 4 ಪರಮಪದವನಗಲಿ ಚಂಡ ಕಿರಣರಥವ ನುಳಿದು ಕ್ಷೀರ ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದ ವಿಠಲ 5
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಷ್ಟ ಪಡುವೆ ಲೋಕನಾಯಕ ಮಾಯಾ ಜೋಕೆಯಿಂದ ಸಲಹು ನಮ್ಮ ಪ ಸಿರಿಯೆ ಪಟ್ಟದರಸಿ ನಿನಗೆ ಕಿರಿಯ ಮಡದಿ ಧರಣಿಯಾಗೆ ಹಿರಿಯ ಮಗನು ಸರ್ವಜನರೊಳಿರುತ ಕಾಮಿಸುವನು ಜಗವ 1 ಮಗನು ಜಗವ ನಿರ್ಮಿಸುವನು ಮಗುಳೆಲಯವಗೈವ ಮೊ- ಮ್ಮಗನು ನಿನ್ನ ದಾಸಿ ಈ ಜಗವ ಮೋಹಿಸುತ್ತಲಿರವಳು 2 ನೀರೊಳಿರುತ ಮೋರೆ ಮುಚ್ಚಿ ಕೋರೆ ಮಸೆದು ಕಂಬದಿಂದ ಹಾರಿಯೆಳೆದು ಧಾರಿಣಿಯ ಧೀರ ನೃಪರನ್ನೆಲ್ಲ ಕೊಂದು 3 ಊರುಬಿಟ್ಟು ಹಾರಿ ವನವ ಜಾರನಾಗಿ ಭಂಗಪಡಿಸಿ ನಾರಿಯರನು ದಾರ ತೇಜಿಯೇರಿ ಮೆರೆದು ಬಾರಿ ಬಾರಿ4 ಪರಮಪದವನಗಲಿ ಚಂಡ ಕರಣರಥವ ನುಳಿದು ಕ್ಷೀರ ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದವಿಠಲ5
--------------
ವೆಂಕಟವರದಾರ್ಯರು
ಸತಿ | ಹರಿ ಸ್ತುತಿಯ ಮತಿಈಯೆ ಪಾರ್ವತಿಯೇ || (ಮನ ಕಲ್ಮಷವ ಕಳೆಯೆ) ಪ ಮೃಡ ಪ್ರಿಯೆಳೆ ಪಾಹಿ 1 ಸತಿ | ಅಂಬೆ ಶಚಿಪತಿಬಿಂಬೆ ಹರಿಯನು | ಕಾಂಬ ಸುಜ್ಞಾನ ||ಉಂಬ ಉಡುವದ | ಕೊಂಬ ಕೊಡುವದ ಬಿಂಬ ಕ್ರಿಯೆಗಳ | ಹಂಬಲವ ಕೊಡು 2 ಸರ್ವ ಮಂಗಳೆ | ದರ್ವಿ ಜೀವಗೆನಿರ್ವಿಕಾರನ | ದುರ್ವಿಭಾವ್ಯನನ ||ಸರ್ವೇಶ ಗುರು | ಗೋವಿಂದ ವಿಠಲನಸರ್ವಕಾಲದಿ | ಸ್ಮರಣೆ ಸುಖ ಕೊಡು 3
--------------
ಗುರುಗೋವಿಂದವಿಠಲರು
ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
--------------
ಪ್ರಸನ್ನವೆಂಕಟದಾಸರು