ಒಟ್ಟು 11 ಕಡೆಗಳಲ್ಲಿ , 9 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತವನ ನೀ ದಯವಾಗು ಶುಭೋದಯ ಗಣಪತಿ ಕಾದುಕೊಂಡಿರು ಸಂತತಂ ಪ. ವಾದವಿರಲಿ ನಿಷುಸೀದ ಗಣಪನೆಂಬ ವೇದಾರ್ಥವ ಪರಿಶೋಧಿಸಿ ನಮಿಸುವೆ ಅ.ಪ. ಯದ್ಯದ್ವಿಭೂತಿಮದೆಂದು ಪೇಳಿದ ಪರಿಶುದ್ಧವಾದ ವಚನ ಶ್ರದ್ಧಾಪೂಜಿತ ಸಕಲ ದೇವರೊಳಗಿದ್ದು ಉಲಿವ ಕಥನ ಮಧ್ವಾಗಮ ಸಂಸಿದ್ಧವಾಗಿರೆ ವೃಥಾ ಪದ್ಧತಿ ತಿಳಿವದು ದುರಾಧ್ಯರಂತಿರಲಿ 1 ಸರ್ವದೇವ ನತಿಯೆಲ್ಲವು ಕೇಶವನಲ್ಲಿ ಸೇರುವದೆಂದು ಯಲ್ಲಾ ಕಡೆಯಲಿ ಚಲ್ಲದೆ ಜಲವ ಬೇರಲ್ಲಿ ಸುರಿಯಿರೆಂದು ಫುಲ್ಲನಾಭ ಶಿರಿವಲ್ಲಭ ವ್ಯಾಸರ ಸೊಲ್ಲ ತಿಳಿದು ನಿಂನಲ್ಲಿಗೆ ಸೇರಿದೆ 2 ವಿಘ್ನಮಹೌಘ ವಿದಾರಣ ಭವಸಂವಿಘ್ನಮನ:ಶರಣಾ ರುಗ್ಣಾತ್ವಾದಿ ನಿವಾರಣ ಸಂಗದ-ಭಗ್ನಸುರಾರಿ ಗಣಾ ನಗ್ನ ಚಿದಾತ್ಮಜ ನೀಲಾಭರಣ ಭ- ಯಾಗ್ನಿ ಶಮನ ನಿರ್ವಿಘ್ನದಿ ಕರುಣಿಸು 3 ಪುಂಡರೀಕ ನಯನ ಅಂಡಜಾಗಮನಾಖಂಡಲ ಸೈನಿಕ ಚಂಡವೈರಿ ಮಥನಾ ಪಂಡಿತ ಪಾಮರ ಸಮದೃಗಭೀಪ್ಸಿತ ಶುಭ ಮಂಡಲ ಮಧ್ಯಗ 4 ವಿಶ್ವಂಭರ ವಿಬುಧೇಶ ಗಣಾರ್ಚಿತ ವಿಶ್ವನಾಥವಿನುತಾ ವಿಶ್ವಜನಿಸ್ಥಿತಿ ಕಾರಣವಾರಣ ವಿಶ್ವಭೂತಿ - ಶರಣ ವಿಶ್ವಾಸಾನುಗುಣಾರ್ಥ ವಿಭಾವನ ವಿಶ್ವದೇವಗತ ವೆಂಕಟರಮಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಗುರುಗಳ ನೆರೆ ನಂಬಿರೊ ಪರಿಪಾಲಿಪ ಗುರುಗಳ ನೆರೆ ನಂಬಿರೊ ಪ ಪರಿ ಅಘದೊಳು ತೊಳಲುವ ಮನು ಜರ ಬವಣೆಗಳರಿತು ಸಜ್ಜನರ ಪಾಲಿಸುವಂಥ ಅ.ಪ ಚಿಂತೆಯೆಲ್ಲವು ನೀಗಿಸಿ ಮನಸಿಗೆ ಬಹು ಸಂತೋಷವನು ಸೂಚಿಸಿ ಪಾದ ಚಿಂತನೆ ಮಾಡುವ ಅಂತರಂಗದ ಭಕ್ತರೊಡನೆ ಮೆರೆವ ದಿವ್ಯ1 ಬೆಟ್ಟದೊಡೆಯನ ಪೂಜಿಸಿ ಭಕುತರ ಮನ ದಿಷ್ಟಗಳನು ಸಲ್ಲಿಸಿ ಸೃಷ್ಟಿಕರ್ತನ ಗುಣ ಸ್ವಚ್ಛ ತಿಳಿದು ಸರ್ವ ಕಷ್ಟಗಳ್ಹರಿಸಿ ಸಂತುಷ್ಟಿಪಡಿಸುವಂಥ 2 ಸರಿಯುಂಟೆ ಧರೆಯೊಳಗೆ ಗುರುಗಳ ಪೋಲ್ವ ನರರುಂಟೆ ಭುವಿಯೊಳಗೆ ಸಿರಿ ಉರಗಾದ್ರಿವಸ ವಿಠ್ಠಲದಾಸರ ಕೂಡಿ ವರಗಳ ಕೊಡುವಂಥ ಪರಮ ಸಾತ್ವಿಕರಾದ 3 ಪರಮ ಮಂಗಳ ಮೂರ್ತಿಯ ರೂಪವ ಹಗ ಲಿರುಳು ಧ್ಯಾನವ ಮಾಳ್ಪರ ಪರಮ ಗುರುಗಳ ಪರಮ ಪ್ರೀತಿಯ ಪಡೆದಂಥ ಉರಗಾದ್ರಿವಾಸ ವಿಠ್ಠಲದಾಸರೆಂಬಂಥ4 ಕರುಣದಿ ಸಲಹುವರು ಭಕ್ತರನೆಲ್ಲ ಕರೆದು ಬೋಧನೆ ಮಾಳ್ಪರು ವರ ಕಮಲನಾಭ ವಿಠ್ಠಲನ ಭಜಿಸುತ್ತ ಸಿರಿ ಶ್ರೀನಿವಾಸನ ನಿರುತ ಪೂಜಿಸುವಂಥ 5
--------------
ನಿಡಗುರುಕಿ ಜೀವೂಬಾಯಿ
ಜನುಮ ಸಾರ್ಥಕವ ಮಾಡಿಸು ತಂದೇ ನೆನೆವರ ಕಾವನು ನೀನೆಂದು ಬಂದೇ ಪ ನಾನಿರುವುದು ಲೌಕಿಕರ ಸಮೂಹ ಏನ ಗೈವುದೋ ಪ್ರಪಂಚದ ಮೋಹ 1 ಅಜ್ಞನು ನಾ ನನ್ನದೆಂಬುದ ಬಿಡಿಸು ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು 2 ಅಜ್ಞನಾ ಯೆನ್ನಪರಾಧಾವ ಕ್ಷಮಿಸು ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು 3 ಹಗಲಿರಳು ಯನ್ನ ಹೆಗಲೊಳು ಕುಳಿತು ಮಿಗಿಲಾಗಿಸು ದಿನ್ಯ ಸೇವೆಗಳನಿತು 4 ನಾಲಗೆ ಮಧ್ಯದಿ ನೀ ನಲಿದಾಡಿ ಬಾಳುವೆಯೆಲ್ಲವು ಭಜಿಪುದ ಮಾಡಿ 5 ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು ಉನ್ನತವೈಭವ ತೋರು ಮನಗೊಂಡು 6 ಜಾಜೀಕೇಶವ ಜಯ ಪದವಿತ್ತು ರಾಜೀವಾಂಬಕ ಪೊರೆ ಭಾರಪೊತ್ತು 7
--------------
ಶಾಮಶರ್ಮರು
ತಿಳಿ ತಿಳಿ ನೀ ತಿಳಿ ತಿಳಿ ನೀ ಅಳಿಯದಾಗಿಹ ಸ್ಥಿರಪದವಾ ಪ ತೋರಿ ಅಡಗುವ ಜಗಕಾಧಾರ ತೋರಿಕೆ ಅಡಗಲು ತಾನುಳಿವಾ ಪಾರಮಾರ್ಥವೆ ತಾನೆನುತಾ 1 ಅನಿಸಿಕೆಯೆಲ್ಲವು ಪುಸಿಯಿಹುದೆಂದು ಘನಾನುಭವವಾ ನೀ ಪಡೆಯುತಲಿ ಅನುದಿನ ಮನನವ ಮಾಳ್ಪುದು ನಿನ್ನೋಳು ಅನುಭವವಾ ದೃಢಪಡಿಸೈ ವಿನುತ ಶಂಕರಗುರುನುಡಿಯಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಬ್ರಹ್ಮವೇ ನೀನೆನ್ನು ಮುಕ್ತನೇಬ್ರಹ್ಮವೇ ನೀನೆನ್ನು ಪ ತುಪ್ಪದ ಹನಿಯೆಲ್ಲವು ಮುಕ್ತನೆತುಪ್ಪವೆಯಲ್ಲವೆ ಮುಕ್ತನೆಇಪ್ಪ ಈ ಜಗವೆಲ್ಲ ಮುಕ್ತನೆತುಪ್ಪದ ತೆರನಂತೆ ಈ ಬ್ರಹ್ಮ 1 ಸಕ್ಕರೆ ಚೂರೆಲ್ಲ ಮುಕ್ತನೆಸಕ್ಕರೆಯಲ್ಲವೆ ಮುಕ್ತನೆತಕ್ಕು ಆಪರಿ ಆ ಜಗವು ಮುಕ್ತನೆಸಕ್ಕರೆ ತೆರನಂತೆ ಈ ಬ್ರಹ್ಮ2 ಅಣುರೇಣು ತೃಣ ಕಾಷ್ಠ ಮುಕ್ತನೆಘನ ಜೀವ ತಾನೆ ಎನ್ನು ಮುಕ್ತನೆಗುಣಾತೀತ ಚಿದಾನಂದ ಮುಕ್ತನೆಅನುಮಾನವಿಲ್ಲದೆ ನೀನೇ ಈ ಬ್ರಹ್ಮ 3
--------------
ಚಿದಾನಂದ ಅವಧೂತರು
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶೋಭನಂ ಶ್ರೀ ಶೋಭನಂ ಶ್ರೀಭೂವಲ್ಲಭ ವೆಂಕಟನಾಯಕ ಪಇಲ್ಲದ ಮಾಯೆಯ ನಿರ್ಮಿಸಲು ಉಳ್ಳವ ನೀನದರೊಳಗಿರಲುನಿಲ್ಲದೆ ನಲಿಯುತ ಹಬ್ಬುತ ಹಸರಲು ಯೆಲ್ಲವು ನೀನಾಗಿರುತಿರಲು 1ಯುಕ್ತಿಗಸಾಧ್ಯನು ನೀನಾಗಿ ಭಕ್ತರ ಪಾಲಿಸಬೇಕಾಗಿಶಕ್ತಿಗೊಡೆಯ ರಾಮಕೃಷ್ಣ ನೀನಾಗಿ ಭಕ್ತರ ಪಾಲಿಸಬೇಕಾಗಿ 2ಕರುಣಾರ್ಣವನ ಕಟಾಕ್ಷದಲಿ ಪರಿಪರಿ ಕಾಮವ ಪಡೆಯುತಲಿತಿರುಪತಿ ವೆಂಕಟರಮಣನ ಮನದಲಿ ಸ್ಮರಿಸುತಲಿರೆ ಸಂಪತ್ತಿನಲಿ 3 ಓಂ ಯೋಗಿನೇ ನಮಃ
--------------
ತಿಮ್ಮಪ್ಪದಾಸರು
ಹನುಮಂತ ನೀನೆಂಥ ಬಲವಂತ ಘನತರಕೈಲಾಸವನು ಬಾಲದೆತ್ತಿದೆ ಪ ಹದಿನಾಲ್ಕು ಲೋಕಂಗಳುದರದಿಟ್ಟವನನ್ನು ಸದಮಲಭಕ್ತಿಯಿಂ ಮುದದ್ಹೊತ್ತು ಹಾರಿದಿ 1 ಅಪರಿಮಿತ ಭುಜಬಲ ಕಪಿವರರೆಲ್ಲ ಬಿಟ್ಟು ಕೃಪಾಕರನು ನಿನಗೆ ಗುಪಿತದುಂಗುರವಿತ್ತು 2 ಸಾಗರ ಹಾರಲು ಆಗದೆ ಸರ್ವರು ನೀಗದ್ಯೋಚನೆ ಗೈಯೆ ಬೇಗ ಸಾಗರ ಜಿಗಿದಿ 3 ಲಂಕೆಯೆಲ್ಲವು ಒಂದೇ ಲಂಕಿಣ್ಯೋರ್ವಳು ಒಂದೇ ಮಂಕುಹೆಣ್ಣೆಂದು ನೀ ಶಂಕೆಯಿಂ ಸದೆದೆಯೊ 4 ದುರುಳನ ಪುರ ಪೊಕ್ಕು ಸರುವ ಭವನಗಳ ಪರಿಪರಿ ಶೋಧಿಸಿದಿ ಪರಮಪಾವನೆಯಳ 5 ಲೋಕಮಾತೆಯನು ಅಶೋಕವನದಿ ಕಂಡು ಲೋಕವೀರನ ಅಂಗುಲೀಕವನಿತ್ತಯ್ಯ6 ಕ್ಷಿತಿಜೆ ದರುಶನದಿಂದ ಮತಿವಂತನೆನಿಸಿ ನೀ ಕೃತಕೃತ್ಯನಾದಯ್ಯಾ ಸತತ ಕ್ಷಿತಿಯ ಮೇಲೆ 7 ಬಣಗು ರಕ್ಕಸಕುಲ ಕ್ಷಣದಿ ಅಳಿದು ನೀನು ವನವ ನಾಶಗೈದು ದಿನಮಣಿಯಂತೊಪ್ಪುವಿ8 ಶೂರ ಅಕ್ಷಯಕುಮಾರಾದಿಗಳ ಮಹ ಮೇರೆದಪ್ಪಿದಬಲ ಸೂರೆಗೈದಾಕ್ಷಣ9 ಮಂಕುದಶಕಂಠನ ಬಿಂಕವ ಮುರಿದಿ ಅ ಸಂಖ್ಯ ವೀರರ ಕೊಂದು ಲಂಕಾದಹನ ಗೈದಿ 10 ಅತಿಭರದಿಂ ಬಂದು ಕ್ಷಿತಿಜಪತಿ ಶ್ರೀರಾಮ ಗತಿ ಶುಭದ್ವಾಯ ಶ್ರುತಪಡಿಸಿ ಹಿತ ಪಡೆದ್ಯೊ 11
--------------
ರಾಮದಾಸರು
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು
ಶ್ರೀಗುರು ಎಂಥಾ ದಯವಂತನಿಹ ನೋಡೆಈಗ ಋಣವ ಕಳೆದೆನೆನಲು ಆನಂದವಹುದು ನೋಡೆಪಕರೆಯುತ ಸನಿಹಕೆ ಚರಣವ ಶಿರದಲಿಟ್ಟನು ನೋಡೆಹರುಷ ಉಕ್ಕುತ ಎನ್ನ ಮುಖವ ನೋಡಿದ ನೋಡೆಪರಮಾತ್ಮನು ನೀತಿ ಎಂದುಪರಿಪರಿ ಹೇಳಿದ ನೋಡೆಅರೆಮರೆಯೆಲ್ಲವು ನೀ ಬ್ರಹ್ಮನೆಂದು ಆಡಿದ ಕರ್ಣದಿ ನೋಡೆ1ತೋರುವುದೆಲ್ಲವು ನೀನೆ ಎಂದು ತಿಳುಹಿದ ಎನ್ನನು ನೋಡೆದಾರಾಸುತ ಸಹೋದರರೆಂಬರ ದಾರಿಯ ಬಿಡಿಸಿದ ನೋಡೆಮೂರು ಗುಣಗಳ ಮಂದಮತಿಗಳ ಮುಂದುಗೆಡೆಸಿದ ನೋಡೆಕಾರಣಕಾರ್ಯವ ಕಳೆದ ಅವಿದ್ಯದ ಕಷ್ಟವ ಕಳೆದ ನೋಡೆ2ಷಟ್ಚಕ್ರಂಗಳ ದಾಟಿಸಿ ಎನ್ನುನು ಶ್ರೇಷ್ಠನ ಮಾಡಿದ ನೋಡೆಅಡರಿಸಿ ಮೇಲಕೆ ಸಹಸ್ರಾರದಿ ಆನಂದಿಸಿದನು ನೋಡೆಕಿಡಿಯುಗುಳುವ ಕೋಟ್ಯಾದಿತ್ಯರ ಬೆಳಕನು ತೋರಿದ ನೋಡೆಮೃಡಚಿದಾನಂದ ಸದ್ಗುರು ಬ್ರಹ್ಮದಿ ಮುಕ್ತನು ಮಾಡಿದ ನೋಡೆ3
--------------
ಚಿದಾನಂದ ಅವಧೂತರು