ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ | ಶೃಂಗಾರದಿಂದ ಗೋಪಾಂಗನೆಯ ಕೂಡ | ತುಂಗ ವಿಲಾಸ ತಾ ರಂಗ ಕೇಳಿಯಲಿ | ಸಂಗೀತ ಪಾಡುತ ಸಾಂಗೋಪಾಂಗದಿಂದಾ ಪ ಹೊಳಿಯ ಜನಕೋಕುಳಿಯ ಕಲಿಸಿ | ಗೆಳೆಯರೊಂದಾಗೆ ಕಳೆಯೆವೇರುತ್ತ | ಅಳಿಯ ಗರುಳಬಲಿಯರರಸಿ | ಇಳಿಯಾಳಗೋಕುಳಿ ವಸಂತವಾ | ಹಳೆಯ ಬೊಮ್ಮನ ಬಳಿಯವಿಡಿದು | ಪಳಿಯ ಚಲುವ ತಿಳಿಯಗೊಡದೆ 1 ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು | ನಕ್ಕು ಕೈಯ ಹೊಯಿದ | ಕ್ಕರದಿಂದ ತಾ | ವರ್ಕರಾಗಿ ನಿಂದೂ ತೆಕ್ರ್ಕೊರಂಗಯೆಂದು | ಜಿರ್ಕೊಳವಿಲಿಂದಲಿಕ್ಕಿದರು | ಸೊಕ್ಕಿದಾ ನೆಡಸಿ ಹೊಕ್ಕು ಎರಗಿದಂ | ತೊಕ್ಕಟರಾಗಿ ದೇವಕ್ಕಿ ತನುಜನ ಸಿಕ್ಕಿಸಿಕೊಂಡರು | ಅಕ್ಕಟಾಬ್ಜಗಬ್ಧಿ ಉಕ್ಕಿದಂತೆ ಮನ | ಉಕ್ಕುತಲಿ 2 ನಾರಿಯರಿಂದ ಉತ್ತರವ ಲಾಲಿಸಿ | ತುಂಬಿ ಅ | ಪಾರನಾರಿ ಪರಿವಾರದವರ ಶರೀರವ ಮೇಲೆ | ವಿ | ಸ್ತಾರವಾಗಿ ಕಾರಿ ವಾರಿದನು ನೀರೆರದಂತಾಗೆ | ಆರೊಂದು ಬುದ್ಧಿಗೆ ಮೀರಿತಿದೊ ಎಂದು | ವಾರುಣಿಪತಿ ಪಂಕೇರುಹಾಭವ ಕಂ || ದರವ ಬಾಗಿಸಿ ಸಾರಿದರು 3 ಮೃಗ ಧ್ವನಿದೆಗೆದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು ಪೊಗಳ ಬಗೆಯಿಂದ | ಮಣಿ ತಾರೆಗಳು ಚಂದ್ರ ನಗುತ ತಮ್ಮ ಪಥಗಳು ನಿಲಿಸಿ | ಮಂಗಳಕರವ ಮುಗಿದು ಸೋಜಿಗ ಜಗದೊಳಗಿದು ಮಿಗಿಲೆನುತಲಿ 4 ದುಂದುಭಿ ಮೊರಿಯೆ ಧಂ ಧಂ ಧಳಾ ಎಂದು | ವೃಂದಾರಕ ವೃಂದ ಚಂದದಿ ಪೂಮಳೆಯಂದುಗರಿಯಲು | ಚಂದಣಗಂದಿಯ ಒಂದಾಗಿ ನಿಂದರು ವಂದಿಸುತ | ಮಂದಹಾಸನಖ ದುಂದುಭಿ ಓಕಳಿಂದಲೆರಾರೈಪಾ ಸಿಂಧು ಮೆರೆದ ನಾರಂದವರದ ವಿಜಯವಿಠ್ಠಲ | ಪುರಂದರದಾಸರ ಮುಂದಾಡಿz ||5
--------------
ವಿಜಯದಾಸ
ಬೆಳಗಿರೆ ಆರುತಿ ಲಲನೆಯರೆಲ್ಲರು ಬಲಿ ನೃಪತಿಯ ಬಾಗಿಲ ಕಾಯ್ದವಗೇ ಪ ಶಿಲೆಯನು ಪದದಲಿ ಲಲನೆಯ ಮಾಡಿದ ಇಳಿಜಾರಮಣನ ಚಲುವ ಮೂರುತಿಗೆ1 ಪದುಮಾವತಿಯಳ ಮದುವೆ ಯಾದವಗೆ ಸುದತಿಯೆಲ್ಲರು ಮುದದಲಿ ಪಾಡುತ 2 ಕರಿವರ ಕರೆಯಲು ಭರದಿ ಬಂದೊದಗಿದ “ಸಿರಿ ಕಾರ್ಪರ ನರಹರಿ“ ರೂಪನಿಗೆ 3
--------------
ಕಾರ್ಪರ ನರಹರಿದಾಸರು
ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು