ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು