ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ಮರುಳು ಮನುಜ ಹರಿಯ ಧ್ಯಾನಿಸೋ ಸ್ಥಿರವಿಲ್ಲವೀದೇಹ ಪ ಬರಿದೆ ಹೊನ್ನು ಮಣ್ಣಿಗಾಗಿ ಇರುಳು ಹಗಲು ವ್ಯರ್ಥವಾಗಿ ಕರೆಕರೆಯನು ಪಡುವೆಯಲ್ಲೊ ಅ.ಪ ತಂದೆ ತಾಯಿ ಸತಿಯು ಸುತರು ಬಂಧು ಬಳಗಗಳಾರಿದ್ದರು ಕರ್ಮ ತಪ್ಪಿಪರಾರು ಸಂದೇಹವಿಲ್ಲೆಂದು ತಿಳಿದು 1 ಜನರು ನಿನ್ನ ಸೇರುತಿಹರು ಕೊನೆಗೆ ಯಾರು ದಿಕ್ಕು ಕಾಣೆ ಮನೆಯಬಿಟ್ಟು ಹೋಗುವಾಗ 2 ಗುರುರಾಮವಿಠಲನಂಘ್ರಿ ಸ್ಮರಿಸಿ ಸ್ಮರಿಸಿ ಹರುಷ ಪೊಂದಿ ಪಾಪಿಯೆನ್ನಿಸಿಕೊಳ್ಳಬೇಡವೊ 3
--------------
ಗುರುರಾಮವಿಠಲ
ಮರ್ದಳವನಿದ ಮನ್ನಿಸು ಮಾರಮಣವರ್ಧಿಸುವದಾನಂದವಸಿದ್ಧವಹ ಶಬ್ದಗಳನು ಸೂಚಿಸುತಲಿದ್ದು ಪ್ರೇರಿಪುದರ್ಥವ ಪಉಭಯ ಮುಖದಿಂದಲುದಿಸಿ ತಾನಿಂತುಶುಭತರಾಕೃತಿಯೆನ್ನಿಸಿಲಭಿಸುತ್ತ ನರ್ತಕಿಯನು ಲಾಲಿಸುತವಿಭು ನಿನ್ನ ನೋಲೈಪುದು 1ಸ್ಥೂಲತರ ಸ್ವನವಾದರೂ ಕಿಂಕಿಣೀಜಾಲಕಿದು ಜೋಡಾಗುತಪಾಲಿಸುತ ಪದಗತಿಯನು ಮನದ ಬಲಕಾಲಯವದಹುದೆನ್ನಲು2ಮೊದಲ ವರ್ಣವು ರುದ್ರನು ಮಧ್ಯದಲಿಹುದುಗಿದಕ್ಷರ ವಿಷ್ಣುವುತುದಿಳಕಾರವು ಬ್ರಹನು ಇಷ್ಟಕ್ಕೆಸದನವಾಗ್ಯನುಸರಿಸಲು 3ಮೂರು ಮೂರ್ತಿಗಳಂಗವ ವರ್ಣಗಳುತೋರೆ ನಡುವೆ ದಕಾರವಸೇರಿದ ರಕಾರ ತಾನು ವ್ಯಂಜನದಿತಾರಕಬ್ರಹ್ಮವಾಗೆ 4ಇಂತು ಮರ್ದಳವೆಸೆಯಲು ಇಂದಿರಾವಂತ ನೀ ಕಟ್ಟಿದಂತೆಕಂತುಪಿತ ತಿರುಪತೀಶಾ ಇಲ್ಲಿ ನೀನಿಂತು ಕೇಳ್ವೆಂಕಟೇಶಾ 5ಓಂ ಗೋಪಗೋಪೀಶ್ವರಾಯ ನಮಃ
--------------
ತಿಮ್ಮಪ್ಪದಾಸರು
ಮಾಲೆ ಹಾಕುವೆ ಲೋಲ ಪುರುಷಗೆ ಪ ಮಲ್ಲ ಮಲ್ಲಿಗೆ ಜಾಜಿ ಸಂಪಗೆಯ ಅ.ಪ ವ್ಯಾಸಕೋಟ್ ಬನಿಯನ್ ಷರಟು ಜುಬ್ಬಾ ವೀಷರಾಯಿ ಬೂಡ್ಸನು ಧರಿಸುವಗೆ 1 ಇಂಗ್ಲೀಷು ಬುಕ್ಕನು ಕೈಲಿ ಹಿಡಿದು ಬಂಗ್ಲೆಯಲಿ ಓದುತ ಕುಳಿತಿರುವಗೆ 2 ಬೈಸ್ಕಲ್ ಮೇಲೆ ಸವಾರಿ ಮಾಡುತ್ತ ಸೈ ಶಹಭಾಸೆನ್ನಿಸಿಕೊಳ್ಳುವವಗೆ 3 ಮಂದಿಯೊಡನೆ ಮಾತಾಡುತ ನಗುವಗೆ 4 ದ್ವಾಸೆ ಬ್ರೆಡ್ಡುಪ್ಪಿಟ್ಟನು ಭಕ್ಷಿಸಿ ತಾಸುರ್‍ಸುರಯೆಂದು ಕಾಫಿಯಕುಡಿವಗೆ 5 ದೊಡ್ಡ ದೊಡ್ಡ ಪ್ಯಾಸುಗಳನು ಮಾಡಿ ಗುಡ್‍ಮ್ಯಾನ್ ದಿಸ್‍ಮ್ಯಾನ್‍ಯೆನ್ನಿಸಿಕೊಳ್ಳುವಗೆ 6 ಗುರುರಾಮವಿಠಲನು ತೋರಿದನಿವರನು ಹಿರಿಯರ ಪುಣ್ಯವು ಎಷ್ಟೆಂದು ಹೇಳಲಿ 7
--------------
ಗುರುರಾಮವಿಠಲ
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ- ಯನು ತಾತಂದು ಕೊಡಿಸಿ ಮನುಮಥನಾಟವೆಘನ ಬೋಧೆಯೆನ್ನಿಸಿ ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1 ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ ಅತಿದ್ವೇಷವೇ ಕೊಟ್ಟಳು ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2 ಇತರ ಚಿಂತೆ ಹೋಯ್ತು ಕುಲದಪ- ಧ್ಧತಿಯ ಮರಿಯ ಲಾಯ್ತು ಹಿತವೇ ಪೇಳಿದರ ಹಿತವಾಗಿ ತೋರುವೆ 3 ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4 ಸ್ಮರನಾಟಯಾವಾಗಲು ಅವಳನೋಡಿ ಕರಗುತ್ತ ಹಗಲಿರುಳು ಪರಗತಿ ಕೊಡುವಂಥ ಗುರುರಾಮ ವಿಠಲನೆ ಅರಿಯವ ಸಂಸಾರ ತೊರೆದು ತುಂಟರಾಗಿ 5
--------------
ಗುರುರಾಮವಿಠಲ
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.ಊರೂರ ನದಿಗಳಲಿಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |ಮಾಡಿಕೊಂಡವರ ಪೂಜೆಯನೆ ಮಾಡಿ |ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3ಮಗನ ಮದುವೆಯು ಎಂದು ಸಾಲವನು ಮಾಡಿ ನೀ |ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||ಹಗರಣವ ಪಡಿಸಿದರೆ ಸಾಲಗಾರರು ಬಂದು |ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |ತಟ್ಟನೇ ಶ್ರೀಹರಿಯ ಪದವ ನಂಬಿ ||ದಿಟ್ಟ ಪುರಂದರವಿಠಲನೆ ಎಂದರೆ |ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5
--------------
ಪುರಂದರದಾಸರು