ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಎಲ್ಲ ದೇವರ ಗಂಡ | ಕೃಷ್ಣ ಚಿಲ್ಲರೆ ದೈವರ ಮಿಂಡ ಪ ಪಾದದಿ ನದಿಯನು ಪೆತ್ತ | ಅದನು ರುದ್ರನು ಶಿರದಲಿ ಪೊತ್ತ ಮಾಧವನ್ಹೊಕ್ಕಳ ಜಾತ | ಶತ ಮೋದನು ಲೋಕ ಪ್ರಖ್ಯಾತ 1 ಸೃಷ್ಟಿ ಸಂಹಾರಗೈದ | ಪರ ಮೇಷ್ಟಿ ರುದ್ರರನಾಳ್ದ ಯೆಟ್ಟ ದೈತ್ಯರ ಶಿರ ಮುರಿದ | ದುರಿತ- ದೃಷ್ಟಿಸಿ ನಾಶಗೈದ 2 ಬಂಟರ ಪಾಲಕನೀತ | ವೈ- ಕುಂಠದ ಒಡೆಯನು ದಾತ ತುಂಟರ ಮಡಹುವ ಸತತ | ನಮಗೆ ನಂಟನು ಗೋಕುಲನಾಥ 3 ಮನಸಿಗೆ ಬಂದುದು ಸಿದ್ಧ | ಪ್ರತಿ ಯೆಣಿಸುವ ಜೀವನೆ ಬದ್ಧ ನೆನೆಸುವರಲಿ ತಾನಿದ್ದ | ದಯ ವನಧಿಯು ಬೆಣ್ಣೆಯ | ಕದ್ದ 4 ಭಂಗ | ತಾ ನಿರುತ ಮಾಡುವ ರಂಗ ಜಯೇಶವಿಠಲ ತುಂಗ | ಮಹಿ ಮಾ ರಕ್ಷಿಸು ದಯಾಪಾಂಗ
--------------
ಜಯೇಶವಿಠಲ
ಕಾಪಾಡು ಕಾಪಾಡು | ಕಾಪಾಡು ಗುರುವೇ ಪ ಶ್ರೀ ಪತಿಯ ಪರಮಾತ್ಮ | ಅಪದ್ಹರ ಗುರುವೇ ಅ.ಪ. ಕೃಪಣ ವತ್ಸಲ ಗುರುವೆ | ಕೋಪಸಲ್ಲದು ನಿಮಗೆಕಾಪಥವ ನೈದುವನು | ತವಕೃಪೆ ವಿಹೀನಾ ||ಅಪರಾಧ ವೆಣಿಸದಲೆ | ಕೃಪೆಮಾಡಿ ಕೈ ಪಿಡಿದುಸುಪಥದಲ್ಲಿರಿಸುತ್ತ | ಆಪವರ್ಗದನ ತೋರೊ 1 ತಂದೆ ತಾಯಿಯು ನೀವೆ | ಬಂಧು ಬಳಗವು ನೀವೆಎಂದೆಂದಿಗೂ ಎನಗೆ ಗುರುವು ನೀವೆ ||ಕಂದ ಮಾಡಿದ ತಪ್ಪ | ತಂದೆಯೆಣಿಸುವರೇನೊಪೊಂದಿ ಭಜಿಸುವೆ ಕಾಯೊ | ತಂದೆ ಕೃಪ ಸಾಂದ್ರಾ 2 ತಂದೆ ಮುದ್ದು ಮೋಹನ್ನ | ವಂದಿಸುವೆ ನಿಮ್ಮಡಿಗೆಇಂದು ತವ ದರ್ಶನವ | ಸಂಧಿಸಲಿ ಬೇಕೋ ||ಇಂದಿರಾಪತಿ ಗುರು | ಗೋವಿಂದ ವಿಠ್ಠಲನಛಂದಾಗಿ ಭಜಿಸುವ | ತಂದೆ ಕೈ ಪಿಡಿಯೋ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊಯ್ಯಂದ ಡಂಗುರವ ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ ಅರವ್ಹೆ ಅಂಜನವಾಗಿ ದೋರುತಲದಕೊ ಹೊ ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ 1 ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ ಮನವಿಗೆ ಆರುವಾಗಿ ದೋರುತಲದಕೊಹೊ ನೆನವ ಘನವಾಗಿ ಸೂಸೂತಲಿದಕೊ ಹೊ ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ 2 ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ ದ್ವಾದಶ ನಾದವು ಸಾಧಿಸಿ ಕೇಳುದು ಹೊ ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ ಓದುವ ಒಂಕಾರ ನಾದವು ತಿಳಿವದು ಹೊ 3 ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ ಹನ್ನೊಂದು ಹತ್ತುಸಾವಿರದ ನೂರೆಂದು ಹೊ ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ ಪುಣ್ಯಗತಿಗೈದಿಸುವ ಜಪವಿದು ಹೊ 4 ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ ಆಶಿಗೈವವಗಿನ್ನು ಭಾಸಿಸಲರಿಯನು ಹೊ ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ ಹೊಯ್ಯೆಂದ ಡಂಗುರವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು