ಪಾದ ವೆಚ್ಚರಿಕೇ ಚೆನ್ನಕೇಶವಮೂರುತೀ ಪ
ಸರಸಿಜಭವಾಂಡವನೊಡೆದಚರಣ ಯೆಚ್ಚರಿಕೇ
ಸುರನದಿಯ ಪಡೆದ ಪದ ಯೆಚ್ಚರಿಕೇ
ಧರಣಿಯನಳೆದ ಪದಾಂಭೋಜಾತ ಯೆಚ್ಚರಿಕೇ
ಪರಮ ಮಂಗಳ ಪಾದಪದ್ಮ ಯೆಚ್ಚರಿಕೇ 1
ಕುಸುಮಕೋಮಲಚರಣ ಯೆಚ್ಚರಿಕೇ
ಋಷಿವಧೂಶಾಪಹರಣ ಯೆಚ್ಚರಿಕೇ
ಶಶಿಸೂರ್ಯತೇಜದಮಲಾಂಘ್ರಿ ಯೆಚ್ಚರಿಕೇ 2
ಶಕಟಪ್ರಕಟನೋದ್ಧøತ ಚರಣ ಯೆಚ್ಚರಿಕೇ
ಶುಕವಂದ್ಯ ಶ್ರೀಚರಣ ಯೆಚ್ಚರಿಕೇ
ನಿಖಿಳ ಪ್ರಮೋದಕಾರಣ ಚರಣ ಯೆಚ್ಚರಿಕೇ
ಅಕಳಂಕ ವೈಕುಂಠನಾಥಪದ ಯೆಚ್ಚರಿಕೇ 3