ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ 1 ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ2 ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ ಹರಿದಾಸರ ಸೇವಕನಾಗುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ನೀನೆ ರಕ್ಷಿಸಬೇಕು ಹೀನಬುದ್ಧಿಯ ನರನ ಪಯೇನೆಂಬೆ ವಿಷಯಗಳೊಳು ಮನಮುಳುಗಿ ಧ್ಯಾನವನೊಮ್ಮೆಯು ಮಾಡದ ಮರುಳ ಅ.ಪಕಂಡುದನೆಲ್ಲವ ಬಯಸಿ ದಂಡಿಸಲಾರದೆ ಮನವಕೆಂಡಕೆ ಮುತ್ತುವ ಶಲಭನ ತೆರದಿ ಕಂಡು ನೊಂದು ಮತ್ತದ ಬಿಡದಿರಲು 1ಕಾಯವ ನಿತ್ಯವಿದೆಂದು ಹೇಯದಿ ತೋರಲು ಕಂಡು ನೋಯದೆ ತಾಪತ್ರಯಗಳನುಂಡು ಆಯಸಗೊಳುತಿರಲಿದ ನೀ ಕಂಡು 2ದುಃಖದಿ ನೋವರ ನೋಡಿ ಸುಕ್ಕುತಲಾಕ್ಷಣದೊಳಗೆದುಃಖವು ಬಂದರೆ ಪರಿಹರವಾಗದೆ ಸಿಕ್ಕಿರೆ ಬಲೆಯೊಳು ದುಃಖಿಸುತಿರಲು 3ಪ್ರಾಚೀನ ಕರ್ಮಗಳು ವೀಚಿಗಳಂದದಿ ಬರಲುಸೂಚಿಸಿ ಶಿಕ್ಷಿಪ ಶಾಸ್ತ್ರದ ನೆಳಲೊಳು ಚಾಚದೆ ತಾವೆ ತಾವಾಗಿರಲು 4ದುರಿತಗಳೆ ಬಹುವಾಗಿ ಸ್ಫುರಿಸುತ್ತಲಿರಲಾಗಿಮರುಗುವ ರಕ್ಷಕ ನೀನಿರಲಾಗಿ ಮರೆಯೊಗದಿರಲೀ ದುರಿತವ ನೀಗಿ 5ದ್ವಂದ್ವಗಳೊಂದೆಂದೊಮ್ಮೆ ನಿಂದಿರೆ ಕರ್ಮದ ಹೆಮ್ಮೆಹೊಂದದು ಎಂದಿಗು ಅದು ತನ್ನ ಸೊಮ್ಮೆಯೆಂದಿಗೆ ಹೃದಯದಿ ನಿಲುವೆ ನೀನೊಮ್ಮೆ 6ಮಾನವ ಬಿಟ್ಟರೆ ಬುದ್ಧಿ ಜ್ಞಾನದ ಸಾಧನ ಸಿದ್ಧಿತಾನೇ ಬರುವುದು ಪುಣ್ಯಸಮೃದ್ಧಿ ಜ್ಞಾನಾತ್ಮಕ ಕೃಷ್ಣ ನೀನಿರು ಹೊದ್ದಿ 7ಭಜಿಸಿದನೆ ಭಕ್ತಿಯಲಿ ಯಜಿಸಿದನೆ ಯಾಗದಲಿದ್ವಿಜತನವನ್ನಾದರು ಬಿಡದಿದ್ದನೆ ಅಜಮಿಳನೆ ನಿನ್ನೊಲವಿಗೆ ಸಾಕ್ಷಿ 8ಕರುಣಕಟಾಕ್ಷವ ನೀನು ುರಿಸಲು ಧನ್ಯನು ನಾನುತಿರುಪತಿ ನಿಲಯ ಶ್ರೀ ವೆಂಕಟ ಕಾಣು ಗುರು ವಾಸುದೇವರೂಪಿನ ಚಿದ್ಭಾನು 9ಓಂ ದಾನವೇಂದ್ರ ವಿನಾಶಕಾಯ ನಮಃ
--------------
ತಿಮ್ಮಪ್ಪದಾಸರು
ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ. ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ. ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ ಅಂದಿಗೆ ಸುಖವೋ ಮಾಧವ ಮಂದರೊದ್ಧರನೆ ಮಾವ ಕಂಸನ ಕೊಂದು ಸಿಂಧುರನಯನನೆ ನೀ ಬೇಗ ಬರಬೇಕೆಂದು ನಾವು ಬೇಡುವೆವು ಬಂದು 1 ಮಧುವನದಲ್ಲಿ ನಿನ್ನಾ ಮಧುರ ಸ್ವರವನ್ನು ಕೇಳಿ ಮದನ ತಾಪಕೆಮ್ಮ ಮರುಳು ಮಾಡಿಸಿ ಮುರಲಿ ನುಡಿಸಿ ಆಧರಾಮೃತ ಪಾನವನ್ನೇ ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2 ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು ದಯವ್ಯಾಕೆ ಬಾರದೊ ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ ಕಾಳಿಮರ್ಧನ ಕೃಷ್ಣನು 3
--------------
ಕಳಸದ ಸುಂದರಮ್ಮ
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ಬಂದಳು ಸಿರಿಲಕುಮಿಯು ನಮ್ಮ ಮನೆಗೆತಂದಳೈಶ್ವರ್ಯಂಗಳ ಪಇಂದಿರೆಹರಿಯುರ ಮಂದಿರ ನಿತ್ಯಾನಂದನಿಲಯಭವಬಂಧ ವಿಮೋಚನಿಅ.ಪಸುಂದರಾಂಗಿ ಸುಗುಣಾಸಿಂಧುಜಗಜ್ಜನನೀಇಂದುಸೋದರಿ ಪೂರ್ಣೇಂದು ಬಿಂಬಾನನೆ 1ಯೆಂದಿಗೆ ಸಂಪದಕುಂದಬರವ ಹಾಂಗೆನಿಂದುಪಾಲಿಸುವನೆಂದು ದೀಕ್ಷೆಯು ಮಾಡಿ2ಬೃಂದಾರಕಸಂಕ್ರಂದನವಂದಿತೆಮಂದಹಾಸದಿ ರಘು ನಂದನ ಸುಪ್ರಿಯೆ 3ಕಂದ ತುಲಸಿದಾಸನೆಂದು ಸಂಭ್ರಮದಿ ಮುಚುಕುಂದವರದ ಪಾದದ್ವಂದ್ವ ಭಕ್ತಿಯು ಕೊಡಲು 4
--------------
ತುಳಸೀರಾಮದಾಸರು