ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ. ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ 1 ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ 2 ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ 3
--------------
ಮೋಹನದಾಸರು
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು