ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿತಾರಸದ ಸೊಬಗ ಕವಿಗಳೆ ಬಲ್ಲರಲ್ಲದೆಯುವತಿಯರು ಕವಿಯ ಹೃದಯವ ಕಂಡರುಂಟೆ ಪ ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿಯಗೂಗೆ ಬಲ್ಲುದೆ ಸೂರ್ಯನುದಯವನ್ನುರೋಗಿ ಬಲ್ಲನೆ ಸುಧಾರಸದ ಸುಸ್ವಾದವನುಭೋಗಿ ಬಲ್ಲನೆ ಯೋಗಮಾರ್ಗ ರೀತಿಯನು 1 ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನುಹೊನ್ನಿದ್ದರೇನು ಲೋಭಿಯ ಕೈಯಲಿಹೆಣ್ಣಿದ್ದರೇನು ಪೌರುಷವಿಲ್ಲದ ನರಗೆಪುಣ್ಯಹೀನಗೆ ಕನಕಶಿಲೆಯಿದ್ದರೇನು 2 ಗಾನರಸಮಾಧುರ್ಯವನು ಬಧಿರಬಲ್ಲನೆಆನೆ ಬಲ್ಲುದೆ ಚಂದನದ ರಸವನುಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು