ಮರೆತಿರಲಾರೆ ಪ್ರಿಯನ ಮಾರನಯ್ಯನ ಪ
ಇರುಳು ಹಗಲು ಅನುಸರಿಸಿ ತಿರುಗುತಲಿ
ಸುರತ ವಾರ್ತೆಗಳನಾಡಿಸುತ ನಲಿಸುತಿಹನ ಅ.ಪ
ಎನಗೆ ಬೇಕಾದುದ ತನಗೆ ತಾ ಕೊಡುತಲಿ
ಮನಕೆ ಹರುಷವ ಕೊಡುವನ ತ್ರಿಲೋಕ ಸುಂದರನ 1
ಎನ್ನ ನೋಡುತಲಿ ಹಿಗ್ಗುತಲಿರುವನ
ಕಣ್ಣಲಿ ಕಾಣದ ಘಳಿಗೆ ಯುಗವಾಗಿರುವುದೆಲೆ 2
ಪ್ರೇಮದಿ ಬಿಗಿದಪ್ಪುತ ಮುದ್ದಿಸಿ ಲಾಲಿಪನ 3
ಚದುರನ ಸರಸವು ವಿಧ ವಿಧ ಲೀಲೆಗಳ 4
ಜನುಮ ಜನುಮಕು ಇವನೆ ಪ್ರಿಯನಾಗಿರ-
ಅನುದಿನ 5
ಅವನಿಲ್ಲದ ಸೌಖ್ಯವು ನರಕಕ್ಕೆ ಸಮ
ಸವಿಯಾಗದು ಅಮೃತವು ವಿಷವಾಗುವುದೆಲೆ ಮನಕೆ 6
ಬೆರೆವ ಸುಖಕೆ ಇನ್ನು ಸರಿಯಾವುದೆ ಜಗದೊಳು 7