ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ ಪ
ಬಿಡೆ ಬಿಡೆನೋ ನಿನ್ನಾ|ಅಡಿಗಳ ಯುಗಳನ್ನಾ
ಬಿಡದಿಹ ಪಾವನ್ನಾ|
ಪೊಡವಿಯೊಳಗೆ|ಮೃಡ ಅಜರಿಗೆ ವಡಿಯ ನೀನೀಗ|
ಒಡಲ ಹೊಕ್ಕೆನು ಕರುಣಾ ನಿನಗ 1
ಹಲವು ಜನ್ಮಂಗಳನು|ಬಲುತೆರ ಸೂಸಿದೆನು|
ನೆಲೆಗಾಆಣದೆ ನಾನು||
ಸುಲಭದಿ ದೊರೆಕಿತು ದೀನೊದ್ದರನೆ 2
ಮುನ್ನ ಮಾಡಿದ ಪರಿ|ಬನ್ನ ಬಡಿಸದೆ ಸಾರಿ|
ಚನ್ನಾಗೊಲಿಹರಿ|
ಯನ್ನ ಹೃದಯದಲಿ ಇನ್ನು ನಿಶಿದಿನಲಿ|ನೆನೆವ ಭಕುತಿಲಿ|
ಸನ್ನುತ ಮಹಿಪತಿ ನಂದನ ಪ್ರಭುವೇ3