ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು