ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಙÁ್ಞನ ನಿರಂಜನ ಸೇವೆಯ ಮಾಡುದೆ ಪೂರ್ಣ 1 ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ 2 ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ ಅಂಜುವ ಭವಭಯ ನೀಗೊ ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು