ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ತತ್ತ ಪ್ರತಿಪಾದನೆ ದೂಡಿಸುವ ಸಂಸಾರ ದೇವ ರೂಢಿಯೊಳು ಭÀಕ್ತರೊಡನಾಡಿ ರಂಗ ಪ. ಭವ ನಾವಿಕನಾಗಿ ಗಾಢನೆ ನಡೆಸುತ ಜೋಡು ಕುಂಡಲಧರ ಅ.ಪ. ಭಕ್ತಿರಸವೆಂಬ ತೊಗಲನ್ನು ಹೂಡಿ ಯುಕ್ತಿಲಿ ಮಣ್ಣಿನ ಬೊಂಬೆಯೊಳಗಾಡಿ ಪರ ಶಕ್ತಿಯೆಂಬ ಹೊಲಿಗೆಯನ್ನು ಕೂಡಿ ಭಕ್ತಿಲಿ ಸ್ತುತಿಸುವ ಭಕ್ತರೊಳಾಡಿ 1 ಗುರುಹಿರಿಯರ ಸೇವೆಯೆಂಬ ಮನಕೊಟ್ಟು ಸರಸದಿ ಮನೆಗೆಲಸವ ಗುಟ್ಟಿಲಿಟ್ಟು ಸರಸಿಜನಾಭನÀ ಮನಸಿನೊಳಿಟ್ಟು ಹರುಷದಿ ಸ್ತುತಿಪರ ಸಲಹುವನೆಂಬೊ ಬಿರುದಿಟ್ಟು2 ಕರುಣಾಮಯನೆಂಬೊ ಪೆಸರನು ಇಟ್ಟು ಹರುಷದಿ ಕೂಗುವ ಭಕ್ತರೊಳಗೆ ತಾ ಗುಟ್ಟು ಕರುಣಾಸಾಗರ ವರ ಶೇಷಾಚಲವಾಸ ಭವ ಸಂಸಾರವ 3
--------------
ಸರಸ್ವತಿ ಬಾಯಿ
ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ
ಶರಣು ನಿನಗೆ ಶರಣೆಂದೆನೊ ಹರಿಯೇ ಕರುಣಿಸಿ ಕಾಯೋ ಎನ್ನಧೊರಿಯೆ ಪ ಪರಮಕೃಪಾಕರ ಪಾವನ ನರಹರಿ ಪಾಲಿಸೊ ಎನ್ನನಿ--- ಶರಣೆಂದ ವಿಭೀಷಣನ ಆದಿಭಕ್ತರ ಶ್ರಮ ಪರಿಹರಿಸಿದಂಥ ಶ್ರೀಧರಾ 1 ಭಕ್ತಾ ಪಾಂಡವ ಪಕ್ಷಾ ಬಲಿಯ ಭೂಮಿಯ ಭಿಕ್ಷಾ ಯುಕ್ತಿಲಿ ನೀ ಸಾಧಿಸಿದ ಯೋಧನೆ ಮುಕ್ತಿದಾಯಕ ದೇವ ಮುರಹರ ಮಾಧವನೆ ಮೌಕ್ತಿಕ ಮುಕುಟ ಧರಿಸಿದನೆ 2 ಸುಂದರ ಮೂರುತಿ-----ಜಗತ್ಪತಿ ಇಂದಿರಾ ಹೃದಯಾನಂದನೆ ಬಂದ ಭಕ್ತರ ಬಿಡದೆ ಅಂದಿಗೆ ನೀನೆ ಪೊರೆದೆ----ಹೆನ್ನ ವಿಠ್ಠಲಾ ಸಲಹೋ ಎನ್ನ 3
--------------
ಹೆನ್ನೆರಂಗದಾಸರು
ಸಾಧಕರೊಳು ಸಿದ್ಧನು | ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ ಭಕ್ತಿಯ ಹಡಗವ ಸಾರಿ ಭವಾಂಬುಧಿ | ಯುಕ್ತಿಲಿ ದಾಟಿ ಮನೋರಥದಾ | ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ | ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ 1 ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ | ನೆನೆಯದೆ ಅರ್ಪಣೆಯಾಗುವದು | ಜನದೊಳು ಅವರವರಂತೆ ಸೋಪಾಧಿಕ | ಯೋಗಿ 2 ಕ್ಷೀರ ನೀರ ಭೇದ ಮಾಡುವ ಹಂಸ ವಿ | ಚಾರದಿ ಸಾರಾಸಾರವ ತಿಳಿದು | ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ | ಧಾರುಣಿ ಜನರನು ತಾರಿಸುವಾ 3 ಪುಣ್ಯದ ಫಲದಾಶೆಯಾತಕ ಬಾಲಗ | ಹೊನ್ನ ತಾ ಗುಂಬೆಂಬ ತ್ಯರನಂದದಿ | ಪರಿ | ಚೆನ್ನಾಗಿ ತಿಳಿದಿಹ ನಿದ್ವಂದಿಯೋ 4 ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ | ಬೆಲ್ಲಸವಿದ ಮೂಕನಂದದಲಿ | ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ | ನಿಲ್ಲವ ಗುರು ಮಹಿಪತಿ ಪ್ರಭು ಶರಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು