ಮರೆಯಲಾರೆ ನಿನ್ನ ತೊರೆಯಲಾರೆ
ಮರೆತು ತೊರೆದು ಜೀವಿಸಲಾರೆ ಕೃಷ್ಣಮುರಾರೆ ಪ
ಹರಿಚರಣಂಗಳೆ ಶರಣೆನದಿದ್ದರೆ ನಾನಪರಾಧಿ ರಂಗ
ಕರುಣವ ಬೀರದೆ ಮರೆ ನೀನಾದರೆ ನೀನಪರಾಧಿ 1
ಭಕ್ತಿ ವಿರಕ್ತಿಯ ಮಾರ್ಗವ ಬಿಟ್ಟರೆ ನಾನಪರಾಧಿ ರಂಗ
ಯುಕ್ತಿಯೊಳೆನ್ನನು ಕತ್ತಲೆಯೊಳಗಿಡೆ ನೀನಪರಾಧಿ 2
ನೀನೇ ಗತಿಮತಿಯೆನಗೆನದಿದ್ದರೆ ನಾನಪರಾಧಿ
ಎನ್ನಪರಾಧವ ಮನ್ನಿಸದಿದ್ದರೆ ನೀನಪರಾಧಿ 3
ಅಪರಾಧಗಳಿನ್ನಿಬ್ಬರಿಗೇತಕೋ ಕಮಲಾಂಗ
ಸುಪಥವ ತೋರುವ ಜಾಣ್ಮೆಯು ನಿನ್ನದು ಮಾಂಗಿರಿರಂಗ 4