ಜಯದೇವಿ ಜಯದೇವಿ ಜಯಭಗವದ್ಗೀತೆ |
ಶ್ರಯ ಸುಖದಾಯಕಮಾತೇ ಶೃತಿ ಸ್ಮøತಿ ವಿಖ್ಯಾತೇ ಪ
ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |
ಸೋಹ್ಯವ ಕಾಣದೆತನ್ನೊಳು ತಾನೇ ಮರೆದಿರಲೀ|
ಬೋಧ ಪ್ರತಾಪದಲೀ|
ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ 1
ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |
ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |
ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |
ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ 2
ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು|
ಸಾವಿರ ಸಾಧನವೇತಕೆ ಜೀವನ್ಮುಕ್ತವನು |
ದೇವಮನುಜರಿಗೆ ತಿಳಿಯದು ಪದಪದ ಮಹಿಮೆಯನು |
ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು 3