ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಿರೊ ಭವಭಂಜನ ಹರಿಯಾ ರಜತ ಪೀಠ ಪುರದಿ ರಾಜಿಪ ದೊರೆಯಾ ಪ. ಮುಷ್ಟಿ ಪೃಥುಕವನ್ನು ಕೊಟ್ಟ ಕುಚೇಲಗೆ ಶ್ರೇಷ್ಠ ಭಾಗ್ಯವನಿತ್ತ ಸಿರಿವರನಾ ಅಷ್ಟಮಠೀಯರು ಮುಟ್ಟಿ ಪೂಜಿಸುವಂಥ ವಿಠಲನಿಂದ ಸರ್ವಾಭೀಷ್ಟವ ಪಡೆಯಿರಿ 1 ಯುಕ್ತಿಯನರಿಯದ ಭಕ್ತರಿಗಿಹಪರ ಭುಕ್ತಿ ಮುಕ್ತಿದನೆಂಬ ಬಹು ಬಿರುದಾ ವ್ಯಕ್ತ ಮಾಡುತ ಕಡು ರಿಕ್ತಜನರ ರಕ್ಷಾ ಸಕ್ತನಾಗಿಹ ಭೈಷ್ಮೀನಕ್ತ ಮಾನಸನನ್ನು 2 ನಿತ್ಯ ಮಧ್ವ ಸರಸಿಯೊಳಗೆ ಮಿಂದು ಉರಗ ಗಿರೀಶ ಸತ್ಯ ವರನ ಮೂರ್ತಿಯ ಕಂಡು ಸುರವರ ಪ್ರಾರ್ಥನೆಯ ವರ ಪ್ರಸಾದವನುಂಡು 3
--------------
ತುಪಾಕಿ ವೆಂಕಟರಮಣಾಚಾರ್ಯ