ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ದುರುಳ ಬುದ್ಧಿಯನು ತೋರಿಸಬೇಡವೊ ಪ ನರವರರಿಗೆ ಇದು ಸರಿಯಲ್ಲವೋ ಕೇಳ್ ಅ.ಪ. ತುಡುಗ ಬುದ್ಧಿಯಿದ ಕಡೆಗಾಲಕೆ ಸರಿ ನುಡಿಗೆದುರಿಲ್ಲವೋ ನಿನಗಿಂದು ಕಡು ಪತಿವ್ರತೆಯರು ಬಿಡುವ ನಯನಜಲ ಉಡಿಯಲಿ ಕಟ್ಟಿದ ಉಜ್ವಲ ಶಿಖಿಯೊ 1 ಧರ್ಮಪಥದಿ ಸಂಚರಿಸುವ ಸುಜನರ ಮರ್ಮವ ಭೇಧಿಸೆ ಮಾತಿನಲಿ ಒಮ್ಮೆ ಅವರು ಬಿಸಿರುಸಿರನು ಚಿಮ್ಮಿಸೆ ಒಮ್ಮೆಗೆ ನಿನ್ನಯ ಕುಲಕ್ಷಯ ನಿಜವು 2 ಮತ್ತನಾದ ನಿನಗೆತ್ತಣದೊ ಇನ್ನು ಯುಕ್ತಾಯುಕ್ತ ವಿವೇಚನೆಯು ಭಕ್ತವತ್ಸಲ ಶ್ರೀ ಕರಿಗಿರೀಶನ ಚಿತ್ತ ಸತ್ಯವೆಂದು ತೊಳಿಯೊ ಮೂಢ 3
--------------
ವರಾವಾಣಿರಾಮರಾಯದಾಸರು
ದೇವ ಕರುಣಾಳು ನೀ ಕಾವಲಾಗಿರುವುದಕೆ ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ. ರೂಢ ಕೈಪಿಡಿದು ಕಾಪಾಡುತಿಹ ಬಿರುದ ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ ಮಾಡಿದಪರಾಧಗಳು ನೋಡಲದ್ಭುತವು 1 ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು 2 ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮಯನ್ನಮ:ಎನ್ನೋ ರಾಮಾಯನ್ನಮ: ನಾಮವರಿತದ್ದೇ ರಾಮಾಯನ್ನಮ: ಪ ಬಂದದ್ದು ಬಾರದ್ದು ರಾಮಾಯನ್ನಮ: ತಂದದ್ದು ತಾರದ್ದು ರಾಮಾಯನ್ನಮ: ಅಂದದ್ದು ಆಡದ್ದು ರಾಮಾಯನ್ನಮ: ಮಿಂದದ್ದು ಮೀಯದ್ದು ರಾಮಾಯನ್ನಮ: 1 ಉಂಡದ್ದು ಉಟ್ಟದ್ದು ರಾಮಾಯನ್ನಮ: ಕೊಂಡದ್ದು ಕೊಟ್ಟದ್ದು ರಾಮಾಯನ್ನಮ: ಕಂಡದ್ದು ಕಾಣದ್ದು ರಾಮಾಯನ್ನಮ: ಬಂಡಾದದ್ದಾಗದ್ದು ರಾಮಾಯನ್ನಮ: 2 ಇದ್ದದ್ದು ಇಲ್ಲದ್ದು ರಾಮಾಯನ್ನಮ: ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ: ಬಿದ್ದದ್ದು ಬೀಳದ್ದು ರಾಮಾಯನ್ನಮ: ಕದ್ದದ್ದು ಕದಿಯದ್ದು ರಾಮಾಯನ್ನಮ: 3 ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ: ಎತ್ತಿದ್ದು ಎತ್ತದ್ದು ರಾಮಾಯನ್ನಮ: ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ: ಅತ್ತದ್ದು ಹೊತ್ತದ್ದು ರಾಮಾಯನ್ನಮ: 4 ಭಕ್ತಿ ಭಾವನೆಯೆಲ್ಲ ರಾಮಾಯನ್ನಮ: ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ: ಯುಕ್ತಾಯುಕ್ತವು ರಾಮಾಯನ್ನಮ: ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: 5
--------------
ರಾಮದಾಸರು
ಶ್ರೀ ವೆಂಕಟ ಶೈಲಾಧಿಪ ನಮೋ ರಾ ಜೀವಭವ ಭವಾರಾಧ್ಯ ನಮೋ ಪ ಭೂವರಾಹಾದ್ಯವತಾರ ನಮೋ ಕೇವಲ ನಿರ್ಗುಣ ಬೋಧಾನಂದ ಮಾ ಯಾವತಾರತೇ ನಮೋ ನಮೋ ಗೋವಿಂದ ಜಗಜ್ಜೀವನ ಜಿತ - ಮದ ದೇವಕಿನಂದನ ದೇವ ನಮೋ 1 ಸ್ವಾಂತ ಧ್ವಾಂತ ನಿಕೃಂತನ ಕಮಲಾ ಕಾಂತ ಶ್ರೀಮದನಂತ ನಮೋ ಚಿಂತಿತ ಫಲದ ಮದಂತರ್ಯಾಮಿ ದು ರಂತ ಶಕ್ತಿ ಜಯವಂತ ನಮೋ ಸಂತತಾದಿಮಧ್ಯಾಂತ ವಿವರ್ಜಿತ ನಂತಾಸನ ಕೃತಾಂತ ನಮೋ 2 ಕುಸ್ಥ ನಮೋ ಆಪಸ್ಥ ನಮೋ ತೇ ಜಸ್ಥ ನಮೋ ವಾಯಸ್ಥ ನಮೋ ಖಸ್ಥ ನಮೋ ಆಶಸ್ಥ ನಮೋ ಮ ಧ್ಯಸ್ಥ ನಮೋ ನಮೋ ಸ್ವಸ್ಥ ನಮೋ ಗೋಸ್ಥ ನಮೋ ಕಾಲಸ್ಥ ನಮೋ ದೇ ವಸ್ಥ ನಮೋ ಸರ್ವಸ್ಥ ನಮೋ 3 ಶ್ರೀಶ ನಮೋ ಬ್ರಹ್ಮೇಶ ನಮೋ ಪ್ರಾ ಣೇಶ ನಮೋ ವಾಣೀಶ ನಮೋ ವೀಶ ನಮೋ ಫಣಿಪೇಶ ನಮೋ ರು ದ್ರೇಶ ನಮೋ ಉಮೇಶÀ ನಮೋ ವಾಸವ ಮುಖ ದೇವೇಶ ನಮೋ ದು ವಾಸವ ನಮೋ ಭೇಶ ಬಿಂದು ಕ್ಷಿತಿಪೇಶ ನಮೋ ಹರಿ ವ್ಯಾಸ ಖಷಭ ಮಹಿದಾಸ ನಮೋ 4 ಲೊಕಾಂತರ್ಗತ ಲೋಕ ನಿಯಾಮಕ ಲೋಕಾಲೋಕ ವಿಲೋಕನ ವಿಷಯ ತ್ರಿ ಲೋಕಾಧಾರಕ ಪಾಲಯ ಮಾಂ ಲೊಕಮಹಿತ ಪರಲೋಕಪ್ರದ ವರ ಲೋಕೈಕೇಶ್ವರ ಪಾಲಯ ಮಾಂ ಲೋಕ ಜನಕ ತೈ ಲೋಕ್ಯ ಬಂಧು ಕರು ಣಾಕರ ವೇಂಕಟ ಪಾಲಯಮಾಂ 5 ಮುಕ್ತಾಮುಕ್ತ ನಿಷೇಧಿತಾವಯವಾ ಸಕ್ತ ಜನಪ್ರಿಯ ಪಾಲಯ ಮಾಂ ರಕ್ತ ಪೀತನಿಭ ಪಾಲಯ ಮಾಂ ನಿಗಮ ತತಿಸೂಕ್ತ ಸಿತಾಸಿತ ಸ್ವಾಂತ ಮಹಿಮ ಸಂ ಯುಕ್ತ ಸದಾ ಹೇ ಪಾಲಯ ಮಾಂ ನಿಗಮ ತತಿನಿಭ ಪಾಲಯ ಮಾಂ ಯುಕ್ತಾಯುಕ್ತಾ ನಜಾನೆ ರಮಾಪತೆ ಭಕ್ತೋಹಂ ತವ ಪಾಲಯ ಮಾಂ 6 ಕಮಠ ಧ ರಾಧರ ನರಹರೇ ಪಾಲಯ ಮಾಂ ಸಾಧಿತ ಲೋಕತ್ರಯ ಬಲಿಮದಹ ಹಯ ಮೇಧ ವಿಭಂಜನ ಪಾಲಯ ಮಾಂ ಭೂಧರ ಭುವನ ವಿರೋಧಿ ಯಮಕುಲ ಮ ಹೋದಧಿ ಚಂದ್ರಮ ಪಾಲಯ ಮಾಂ ಬುದ್ಧ ತನು ಶ್ರೀ ದಕಲ್ಕಿ ಕಪಿ ಲಾದಿರೂಪ ಹೇ ಪಾಲಯ ಮಾಂ 7 ಶರಣಾಗತ ರಕ್ಷಾಮಣಿ ಶಾಙ್ರ್ಗ ಅರಿದರಧರ ತವ ದಾಸೋಹಂ ಪರ ಪುರಷೋತ್ತಮ ವಾಙ್ಮನೋಮಯ ಭಾ ಸ್ಕರ ಸನ್ನಿಭ ತವ ದಾಸೋಹಂ ಗರುಡಸ್ಕಂಧ ಕರಾರೋಪಿತ ಪದ ಸರಸಿಜಯುಗ ತವ ದಾಸೋಹಂ ಉರಗಾಧಿಪ ಪರಿಯಂಕಶಯನ ಮಂ ದರ ಗಿರಿಧರ ತವ ದಾಸೋಹಂ 8 ಸೃಷ್ಟಿ ಸ್ಥಿತಿಲಯಕಾರರೂಪ ಪ್ರ ಹೃಷ್ಟ ತುಷ್ಟತವ ದಾಸೋಹಂ ಪರಮೇಷ್ಟಿ ಜನಕ ಶಿಷ್ಟೇ ಷ್ಟದಿಷ್ಟ ತವ ದಾಸೋಹಂ ಜೇಷ್ಠ ಶ್ರೇಷ್ಠ ತ್ರಿವಿಷ್ಠ ದಾರ್ಚಿತ ವೃಷ್ಣಿವರ್ಯ ತವ ದಾಸೋಹಂ ಅಷ್ಟ ಫಲಪ್ರದ ಪಕ್ಷಿಧ್ವಜ ಜಗನ್ನಾಥ ವಿಠ್ಠಲ ತವ ದಾಸೋಹಂ 9
--------------
ಜಗನ್ನಾಥದಾಸರು
ಸ್ವಾಮಿ ತಪ್ಪಾರಿಸುವರೆ ನೀ ನಮ್ಮ ಸುಮ್ಮನುಂಡಾಡುವ ಬಾಲಕ ನಿಮ್ಮ ಅಮ್ಮ ಅಪ್ಪನೆಂದಾಡುದೆ ನಾ ತಮ್ಮ ಕಂ ಕಿಮೆಂದಾಡಕರಿಯೆ ನಾವಮ್ಮ 1 ಓದಿ ತಿಳಿಯಲರಿಯೆ ಶಾಸ್ತ್ರವೇದ ಭೇದಿಸಲರಿಯೆ ನಾ ನಿಮ್ಮ ಬೋಧ ಹಾದಿ ತಿಳಿಯುದೆ ಬಲು ತಾ ಅಗಾಧ ಇದೆ ಪಾಲಿಸಬೇಕಯ್ಯ ಸುಪ್ರಸಾದ2 ಭಕ್ತಿ ಮಾಡಲರಿಯೆ ನಿಮ್ಮ ದೃಢ ಯುಕ್ತಿ ತಿಳಿಯಲರಿಯದೆ ನಾ ಮೂಢ ಶಕ್ತಿ ಸಾಮಥ್ರ್ಯನ್ನೊಳು ನೋಡಬ್ಯಾಡ ಯುಕ್ತಾಯುಕ್ತ ನೋಡದಿರು ಎನ್ನ ಕೂಡ3 ಪತಿತಪಾವನನೆಂಬ ನಿನ್ನ ಬಿರುದು ಎತ್ತ ಓಡಿಹೋಗಬಲ್ಲದದು ಚಿತ್ತ ನೆಲೆಗೊಂಡು ಬಂದು ನಿಮ್ಮ ಬೆರೆದು ಮತ್ತ ಒರೆದು ನೋಡುವದಿದೆ ಅರೆದು 4 ಶರಣ ಹೊಕ್ಕ ಮ್ಯಾಲೆಲ್ಲಿಹುದೈಯ ಮರಣ ಚರಣಕಮಲಕ್ಕೊಪ್ಪಿಸಿಹೆ ನಾ ಹರುಣ ಅರಿತು ಮಾಡುವ ನಿಮ್ಮ ದಯ ಕರುಣ ತರಳ ಮಹಿಪತಿ ನಿಮ್ಮಣುಗ ಪೂರ್ಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂತೋಷ ಕಂಡ್ರೀ ಸ್ವಾಮಿ ಸಂತೋಷ ಕಂಡ್ರೀ ಪಚಿಂತೆ ಚಿಂತೆ ಬಿಟ್ಟೀ ಶಾಂತದೂತನಾಗಿಕಂತುಪಿತನ ಚಿಂತಿಸುವಗೆ ಸಂತೋಷ ಕಂಡ್ರೀ1ಕೆಟ್ಟ ದುಷ್ಟ ಕಾರ್ಯ ಮಾಡೀ ಕಷ್ಟ ನಷ್ಟಗಳಿಗೆ ಸಿಕ್ಕಿಹೊಟ್ಟೆಹೊರೆವದುಷ್ಟಗೆಲ್ಲ ಸಂತೋಷ ಕಂಡ್ರಿ2ಆಶಾಪಾಶ ತ್ಯಜಿಸಿ ಹಲವು ಲೇಸು ಶ್ರೇಯ ಕಾಯಗೈದಈಶನಂಘ್ರಿ ದಾಸರಿಗೆ ಸಂತೋಷ ಕಂಡ್ರಿ3ತರುಣಿ ತರುಣರಿದ್ದರೇನು ಧರಣಿಗರನಾದರೇನುಹರಿಯ ಕರುಣವಿಲ್ಲದುಂಟೇ ಸಂತೋಷ ಕಂಡ್ರೀ4ಕಾಯದಲ್ಲಿ ಮೋಹ ತೊರೆದುಜೀಯಕೃಷ್ಣರಾಯನೆಂದುನ್ಯಾಯವಂತ ಜೀವರೀಗೆ ಸಂತೋಷ ಕಂಡ್ರೀ5ಯುಕ್ತಾಯುಕ್ತ ಯೋಚಿಸದೆ ಪಕ್ತ ಕಾಮಸಕ್ತನಾದರಕ್ತಮದದ ಶಕ್ತಗಿಹುದೆ ಸಂತೋಷ ಕಂಡ್ರಿ6ತಂದೆ ತಾಯಿ ನೀನೆಂದೆಂಬ ಬಂಧು ಬಳಗ ನೀನೆಂದೆಂಬಗೋವಿಂದನಾ ದಾಸರ್ಗೆಲ್ಲ ಸಂತೋಷ ಕಂಡ್ರೀ7<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ