ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ. ಮರ ಹಾರುವಂಥ ಮರ್ಕಟಕುಲದಲವತರಿಸಿ ಶರಧಿ ಲಂಘಿಸುತ ದ್ವೀಪಾಂತರವಾಸಿ ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ ಕರದಿ ಎಂಜಲು ಕೊಂಡು ಮರವನೇರಿದನೆ 1 ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ ಹಿತವೆ ರಕ್ಕಸಿ ಸಂಗ ಪಥದಿ ನಿನಗೆ ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ 2 ತುಳುವಂಶಜನೆ ನೀ ಲಲನೆ ಸಂಗವ ತೊರೆದು ಅಲೆದೆ ಯತಿಯಾಗಿ ಈ ಇಳೆ ಎಲ್ಲವ ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ ಒಲಿಸಲೋಡಿದೆ ಆರು ಬರದಂಥ ಗಿರಿಗೆ 3
--------------
ಅಂಬಾಬಾಯಿ
ನೆಲೆಯಾವುದಯ್ಯ ಹೊಲಬಾವುದಯ್ಯತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ ವೇದ ಸಾರವನೋದಿ ವೇದದರ್ಥವ ಕಂಡುಆದಿಯಾಗಿಹಅನಾದಿ ಮೂರುತಿಯನ್ನುಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ 1 ತನುದುಸ್ಥಿತಿಯ ಕಂಡು ತನುವಲಿಹನ ಕಂಡುಚಿನುಮಯವಾದ ಚಿದ್ರೂಪನೆಂಬನಮನದ ಕೊನೆಯಲಿಟ್ಟು ಮಥಿಸಲಾರದೆ ತಾನುಘನ ದುಃಖದೊಳು ಬಿದ್ದು ಗಲಭೆಯಾದವಗೆ2 ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡುಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನುವರ ಚಿದಾನಂದ ಪದ ಹೊಂದಲಾರದೆ ನರಕದೊಳಗೆ ಬಿದ್ದು ನರಳಾಡುವವನಿಗೆ 3
--------------
ಚಿದಾನಂದ ಅವಧೂತರು
ಗೋಕುಲ ಕೃಷ್ಣ ಗೋಪಿಸ್ತ್ರೀಯರ ಕೂಡೆ ||ಲೋಕ ಮೋಹನ ಲೀಲೆ ತೋರಿದನಲ್ಲಿ ||ಆ ಕನ್ಯೆಯರಿಗೆಲ್ಲ ಬೇಕಾದರೂಪ ತೋರಿ ||ಸಾಕಾರಿಯಾಗಿರೆ ಬಳಿಕೊಂದು ದಿವಸ 1ಸೀರೆ ಕುಪ್ಪಸ ತೊಟ್ಟು | ಹಾರ ಕಡಗವಿಟ್ಟು |ನಾರಿಯೊಬ್ಬಳುಕ್ಷೀರಮಾರುತ್ತ ಬರಲೂ ||ಕೇರಿ ಕೇರಿಗಳಲ್ಲಿ ಚರಿಸುತ್ತಲಿರೆ ಕಂಡು |ವಾರಿಜಾಕ್ಷನು ನಡೆತಂದು ತಾ ನಗುತ್ತ 2ನೀಲಕುಂತಳೆ ಗುಣಶೀಲೆ ಚಂದಿರಮುಖಿ |ಹಾಲ ಸುಂಕವ ಕೊಟ್ಟು ಪೋ | ಗವ್ವ ಚದುರೆ ||ಕೇಳಿಮಾನಿನಿಕ್ರೋಧ ತಾಳಿ ಕೃಷ್ಣನ ಕೂಡೆ |ಹಾಲ ಸುಂಕದ ಕಟ್ಟೆ ಯಾವುದಯ್ಯ ನಿನಗೆ 3ಎಂದು ನಿಂದಿಸಿ ಹಿಂದೆ ತಿರುಗಿ ಪೋಗಲು | ಕಂಡು |ನಂದಕಂದನು ತಾ | ಸೆರಗ ಪಿಡಿದು ತಾ ನಿಲಿಸೆ ||ಚಂದಿರಮುಖಿ ತಾನು ಸೆಣಸಿ ಕೃಷ್ಣನೊಳ್ ಸೋತುಕಂದಿ ಕುಂದುತ ಕೈಯ ಮುಗಿದು ಪೇಳಿದಳು 4ತಂದೆ ಸೆರಗ ಬಿಡು ಕಂದ ಸೆರಗ ಬಿಡು |ಇಂದೆನ್ನ ಗುರುವರ್ಯ | ಸೆರಗ ಬಿಡಯ್ಯ ||ತಂದೆಯು ನಾನಲ್ಲ | ಕಂದನಾನಲ್ಲವೊ | ನಿನ್ನ |ತಂದೆಗಳಿಯನೆಂದು ಭಾವಿಸೆ ತರುಣಿ 5ಮಾವ ಸೆರಗ ಬಿಡು |ಭಾವಸೆರಗ ಬಿಡು |ಸೇವಕಿ ನಿನಗೆ ನಾ ಸೆರಗ ಬಿಡಯ್ಯ ||ಮಾವನಲ್ಲವೊ | ಕೇಳೆ ಭಾವನಲ್ಲವೊ | ನಿನ್ನ ||ಮಾವನ ಮಗನು ನಾ ಕಾಣೆಂದ ಕೃಷ್ಣಾ 6ವಿಧ ವಿಧದಲಿ ಮಾತನಾಡುತಾ ಕೃಷ್ಣ |ಮದನತಾಪವ ಹೆಚ್ಚಿಸಿದನು ಮಾನಿನಿಗೆ |ಪದುಮಾಕ್ಷಿ ಭ್ರಮೆಗೊಂಡುಮದನತಾಪದಿ ನೊಂದು |ಮದನತಾತನನಪ್ಪಿ | ಮುದ್ದಿಸೆ ಕಂಡು 7ತಾಳು ತಾಳೆಲೆ ಸಖಿ ತಾಯಿ ತಂಗಿಗೆ ಸಮ |ಕೇಳು ಜಗದಿ ಪರದಾರಾಂಶ ಜನಕೆ ||ಲೋಲಲೋಚನ ಎನ್ನ ಗೋಳು ಗುಡಿಸದೀಗ |ಆಳು ನಿನ್ನಯ ಜನನಿಗೆ ಸೊಸೆ ಎಂದು ದಯದಿ 8ಇಂತೆಂದು ಕೃಷ್ಣನ ಎದೆಗೆ ಕುಚವನಿತ್ತು |ಸಂತೋಷದಿಂದಲಪ್ಪೀ ಸ್ಮರಿಸುತ್ತಲಿರಲುಕಂತುಜನಕೆ ಗೋವಿಂದಗೆ ದಾಸರೋಳೆಂತು |ಕೃಪೆಯೋ | ನಾರಿಗೊಲಿದಿಷ್ಟ ಸಲಿಸೆ ಗೋಕುಲ 9
--------------
ಗೋವಿಂದದಾಸ
ದಾರಿ ಯಾವುದಯ್ಯ ವೈಕುಂಠಕೆದಾರಿ ತೋರಿಸಯ್ಯಾ ಪದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನಪಾದಸೇರುವುದಕ್ಕೆಅ.ಪಬಲುಭವದನುಭವದಿ ಕತ್ತಲೆಯೊಳುಬಲು ಅಂಜುತೆ ನಡುಗಿ ||ಬಳಲುತ ತಿರುಗಿದೆ ದಾರಿಯ ಕಾಣದೆಹೊಳೆಯುವ ದಾರಿಯ ತೋರೊ ನಾರಾಯಣ 1ಪಾಪವ ಪೂರ್ವದಲಿ ಮಾಡಿದುದಕೆಲೇಪವಾಗಿರೆಕರ್ಮಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆಶ್ರೀಪತಿ ಸಲಹೆನ್ನ ಭೂಪ ನಾರಾಯಣ 2ಇನ್ನು ನಾ ಜನಿಸಲಾರೆ ಭೂಮಿಯ ಮೇಲೆನಿನ್ನ ದಾಸನಾದೆನೊ||ಪನ್ನಗಶಯನ ಶ್ರೀಪುರಂದರವಿಠಲಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3
--------------
ಪುರಂದರದಾಸರು