ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ ಮನ್ಯುಮೋಹಾಸಕ್ತಿ ಕಾಮಲೋಭಾ ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ 1 ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನ ಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ 2 ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ 3
--------------
ಜಗನ್ನಾಥದಾಸರು
ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ಪ ಬೇಡ ಸುಖವು ಕೃಷ್ಣ ಬೇಡ ಫಲವಿಫಲ ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ ನಿದ್ರೆಸುಖವು ಬೇಡ ಭದ್ರಭೋಜನ ಬೇಡ ತಿದ್ದಿದ ವಾಸ್ತುವುಬೇಡ ಮಧುರವು ಬೇಡ ಸದನ ವಿತ್ತವು ಬೇಡ ಹೃದಯದಿ ರಾಮನಾಮ ಪರಿಹರಿಸಲು ಬೇಡ 1 ನರಕ ಬಾಧೆಯ ಪರಿಹರಿಸಲು ಬೇಡ ದುರಿತ ಸಂತತಿಗಳ ತೊರೆಯಿಸ ಬೇಡ ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ ನಿರುತ ನಿನ್ನಯ ಪದ್ಮ | ಚರಣವ ತೋರೆಂದು2 ಮಾವಿನಕೆರೆರಂಗ ಶ್ರೀವನಿತಾ ಸಂಗ ಭಾವಜಪಿತರಂಗ ಗರುಡ ತುರಂಗ ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3 ನೀ ಮರೆಯದಿರಯ್ಯ ನಾಮರೆಯುವನಯ್ಯ ಕಾಮಿತವೊಂದಿದ ನೀಡೊ ಮುಕುಂದ ಸೋಮಧರ ವಂದಿತ ರಾಮದಾಸಾರ್ಚಿತ ಭೀಮವಿಕ್ರಮರೂಪ ಅಮಿತಕಲಾಪಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು