ಹೊಂದಿಲ್ಲದೆ ನೀ ಕುಂತೀ ಪ
ಪರಮನು ಕೇಳಿದರೇನಂತೀ ಕೆಟ್ಟ
ನರಕದೊಳಗೆ ಯಮಬಾದಂತೀ ಅ.ಪ
ಅಜನನು ಬೆರೆಯಲು ಬೇಕಂತೀ ಆದು
ಭಜನೆಗೆ ಬಾರದು ಯಾಕಂತೀ
ನಿಜವೊಂದಿಲ್ಲದೆ ನೀಕುಂತೀ ಆದ
ಭಜಿಸಿ ನೋಡದೆ ಸುಮ್ಮನ್ಯಾಕ್ಕುಂತೀ 1
ಸಾಧನೆ ಮಾಡುವೆ ಹೀಗಂತೀ ನಿಜ
ಬೋಧೆಯಿಲ್ಲದೆ ಯಾಕೀ ಭ್ರಾಂತೀ
ಭೇದಿಸುವನು ಸೂರ್ಯನಕಾಂತಿ ನಿಜ
[ದಿಂದ]ತುಲಸಿರಾಮನೆ ಗುರು ವೇದಾಂತಿ 2