ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(40ನೇ ವರ್ಷದ ವರ್ಧಂತಿ) ಕ್ಷಿಪ್ರ ಪ್ರಸಾದಕರ ದೊರೆಯೆ ಅಜಭವಾ- ದ್ಯ ಪ್ರಮೇಯಾ ಸಂತಸುಗುಣಾಬ್ಧಿ ಹರಿಯೆ ಪ. ಇಳೆಯೊಳಗೆ ನಾ ಬಂದು ಕಳೆದೆ ನಾಲ್ವತ್ವರುಷ ಉಳಿದ ಪರಿಮಿತಿಯರಿಯೆ ಗಳಿತವಾಯಿತು ದೇಹ ಬಳಲಿದೆನು ಬಯಲಾಸೆ ಬಲೆಯೊಳಿಂದಿನವರೆಗು ನಳಿನನಾಭನೆ ನಿನ್ನ ನಂಬಿದೆನು ಮನವರಿತು ಮುಳುಗಲಾರೆನು ಮೋಹ ಕಡಲ ಮಾಧವನೆ ತಿಳಿಯದೆ ನಿನಗೆ ಪೊನ್ನೊಡಲ ಮುಂದಿಂತು ದುರಿತ ಸಿಡಿಲ 1 ದೇವಾಧಿದೇವ ತವ ಸೇವಾನುಕರನ ಹೊ- ನ್ನಾವರದೊಳಿರಿಸಲಿನ್ಯಾವನರಸಲಿ ಕೃಷ್ಣ ಭಾವ ಶುದ್ಧಿಯನರಿತು ಭಜನೆ ಮಾಡುವದೆಂತು ಸಾವಕಾಶವಿದ್ಯಾಕೆ ಸಾಹಿತ್ಯಗಳು ಜೋಕೆ ನಿತ್ಯ ಕೈಗೊಂಬ ಕೀರ್ತಿ ಸಂ- ಭಾವನಾ ಸುಖವ ನಾನುಂಬಾ ತರವ ಸಂ- ಭಾವಿಸು ದಯಾಂಬೋಧಿ ದೀನಾವಲಂಬ 2 ರಕ್ಕಸಾಂತಕ ನೀನೆ ದಿಕ್ಕೆಂದು ನಿನ್ನಿದಿರು ಬಿಕ್ಕಿ ಬಿರಿದಳಲುವೆನು ಸೊಕ್ಕಿ ಕಾಡುವ ದೊಡ್ಡ ಜಕ್ಕಣಿಯ ಕಾಲಿಂದ ತಿಕ್ಕಿ ತೀರಿಸು ನಿನಗ- ಶಕ್ಯವಾವುದು ಸ್ವರ್ಣಪಕ್ಷ್ಯೇಂದ್ರಗಮನಕರ ಚಕ್ರಭೂಷಣ ವೆಂಕಟೇಶದಾಸ ಜನ ಕಕ್ಕರದಿ ತೋರು ಸಂತೋಷ ಭಕ್ತಿಫಲ ದಕ್ಕುವಂದದಿ ಮಾಡು ದುರಿತಾಬ್ಧಿಶೋಷ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು