ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1 ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2 ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ 1 ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ ರೊಳಗೆ ಮೇಲೆನಿಪ ಸುಶೀಲ ತುಳಿದೆ ಬಕ ಆಘಪ್ರಲಂಬಾದಿ ದೈತ್ಯಜಾಲ ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್ ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ 2 ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ ತೋರಿದ ಪರಾತ್ಪರ ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು ಅಪ್ರಮೇಯ ಜಾಜೀಶ್ವರ 3
--------------
ಶಾಮಶರ್ಮರು
ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು