ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1 ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2 ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಹನ ಈಕ್ಷಿಸು ಪ್ರೇಮದೊಳೆನ್ನ ನೀಂ ಪ ಭೂರಿ ಸಾರಸ ಸನ್ನಿಭ ಲೋಚನ ಶ್ರೀಶ ಶಾರದ ಚಂದ್ರಸಮ ಹಾರ ವಿಹಾರ1 ಇಂದಿರೆ ತನುಮಂ ಅಂದದೊಳಪ್ಪುತ ಮೋದವ ಪೊಂದಿ ವಂದಿತ ಜನ ಮನೋನಂದ ವಿನೋದ 2 ಶ್ರೀವನಮಾಲಾ ಭಾವಿತಭಾವ ದೇವಚಿದಾತ್ಮ ಜೀವಪ್ರಭಾವ ಶ್ರೀ ವಿಭವಾನ್ವಿತ ಪಾವನರೂಪ 3 ವೈರಿ ಜ್ಞಾನ ಸ್ವರೂಪ ಭಾನುಕರಾರ್ಪಿತ ಭಾಮ ಯಶೋಧ ಧೇನುಕಪುರಪ್ರಿಯ ಗಾನ ಸ್ವರೂಪ 4
--------------
ಬೇಟೆರಾಯ ದೀಕ್ಷಿತರು
ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ 1 ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ ರೊಳಗೆ ಮೇಲೆನಿಪ ಸುಶೀಲ ತುಳಿದೆ ಬಕ ಆಘಪ್ರಲಂಬಾದಿ ದೈತ್ಯಜಾಲ ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್ ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ 2 ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ ತೋರಿದ ಪರಾತ್ಪರ ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು ಅಪ್ರಮೇಯ ಜಾಜೀಶ್ವರ 3
--------------
ಶಾಮಶರ್ಮರು
ಭೇರಿಬಾರಿಸುತಿದೆಭೂರಿದ್ವಾರಕೆ ಅರಸನಾಗರ ದ್ವಾರದ ಮುಂದೆಕ್ರೂರ ಖಳರ ಎದೆ ದಾರಿಸುವುದು ಯದುವೀರರಭೇರಿಮುರಾರಿಯ ಪಾಳೆಯಭೇರಿಪ.ಅನಂತಾಸನವಿದೇ ಅನಾದಿ ಶ್ರೀವೈಕುಂಠಅನಂತಶ್ವೇತದ್ವೀಪಸ್ಥಾನಈ ನಂದನಸೂನುಆನಂದಮಯಬ್ರಹ್ಮಮೌನಿ ಸುರನಿಕರ ಧ್ಯಾನಗೋಚರನೆಂದು 1ಬ್ರಹ್ಮ ರುದ್ರೇಂದ್ರಾದಿ ಸುಮ್ಮನಸರನಾಳ್ವರಮ್ಮೆಯರಸ ಸರ್ವೋತ್ತಮಧರ್ಮೋದ್ಧಾರ ಅಧರ್ಮಸಂಹರಪರಬ್ರಹ್ಮವಾಸುದೇವಬ್ರಹ್ಮಣ್ಯದೇವನೆಂದು2ಸೂತ್ರರಾಮಾಯಣ ಪವಿತ್ರೋಪನಿಷದ್ವೇದಗೋತ್ರಭಾರತ ಪಂಚರಾತ್ರಶಾಸ್ತ್ರೌಘ ಸನ್ಯಾಯಶಾಸ್ತ್ರ ಸ್ಮøತಿನಿಕರಸ್ತೋತ್ರಕ ಯಜÕ ಗೋಪೀ ಪುತ್ರ ಶ್ರೀಕೃಷ್ಣನೆಂದು 3ಮಂಗಳಾನಂತ ಗುಣಂಗಳಬುಧಿ ತ್ರಿಗುಣಂಗಳಿಂದೆಂದಿಗಸಂಗಗಂಗೆಯರ್ಚಿತ ಗಂಗಾನ್ವಿತಪದತುಂಗವಿಕ್ರಮಯಜ್ಞಾಂಗಾಚ್ಯುತನೆಂದು4ನೂರೆಂಟುವೆಗ್ಗಳಹದಿನಾರು ಸಾವಿರ ದಿವ್ಯನಾರಿಯರಾಳುವಶೌರಿನಾರದನಿದರ ವಿಚಾರ ಮಾಡಲಿ ಬರೆಮೂರುತಿ ಅನಂತ ತೋರಿ ಬೆರೆತರೆಂದು 5ಸೃಷ್ಟ್ಯಾದಿ ಕಾರಣ ಶಿಷ್ಟ ಸಂರಕ್ಷಣದುಷ್ಟಮಥನ ಪೂರ್ಣತುಷ್ಟಕಷ್ಟ ಜರಾಮೃತ್ಯು ನಷ್ಟಕರ ಏಕೌವಿಷ್ಣು ವರಿಷ್ಠ ವಿಶಿಷ್ಠ ಸುಖದನೆಂದು 6ವೇದೋದ್ಧಾರ ಕ್ಷೀರೋದಧಿಮಥನ ಧರಾಧರ ಹಿರಣ್ಯಕಸೂದನಪಾದತ್ರಯ ಖಳಛೇದಕ ಯಶೋಧರಮಾಧವಬುದ್ಧಕಲಿರೋಧ ಕಾರಣನೆಂದು7ಪಾಂಡವ ಸ್ಥಾಪಕ ಲೆಂಡಕೌರವ ಹರ್ತಗಾಂಡೀವಿಸಖಸುರಶೌಂಡಚಂಡ ಚಂದ್ರ್ರಾನಂತಾಖಂಡ ಪ್ರಕಾಶಮತಪೌಂಡ್ರಕ ಸಾಲ್ವಮತ ಖಂಡಾನಂತನೆಂದು 8ಧಾಂ ಧಾಂ ಧಿಮಿಕಿಟ ಧಾಂದಂದಳ ದಂದಳ ಧಿಮಿಕಿಟಧಾಂತಾಂಧಿ ಮದಾಂಧರಿಗೆ ಅಂಧಂತಾಮರ ಸಧಾಂಧೊಂದೊಂದೊಂತು ಪ್ರಸನ್ನವೆಂಕಟಮಂದಿರಾನಂದನಿಲಯಭಕ್ತವತ್ಸಲನೆಂದು9
--------------
ಪ್ರಸನ್ನವೆಂಕಟದಾಸರು
ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು