ಕೋಲಾಟದ ಪದಗಳು
ಕುಶಲದಿಂದ ಬಾಳಿರೈ ಯಶವನಾಂತು ಬೆಳಗಿರೈ
ಕುಶೇಶಯಾಕ್ಷನೊಲಿದು ಸಂತೋಷವೀಯಲಿ ಪ.
ಪಿತೃಭಕ್ತರೆನಿಸುತ ಮಾತೃಸೇವೆಗೈಯುತ
ಪುತ್ರಪೌತ್ರಮಿತ್ರರಿಂ ಕಲತ್ರಭಾಗ್ಯದಿಂ1
ಕಾರ್ಯಸಿದ್ಧಿಯಾಗೆ ನಿಮ್ಮಾರ್ಯಮಾತೆಗೆರಗುತ
ಸಾರಸತ್ಯಧರ್ಮಮಂ ನೀವ್ ಮೀರದಾವಗಂ 2
ದಾನವೇಂದ್ರನ ತೆರದೊಳು ದಾನಶೂರರೆನ್ನಿಸಿಳೆಯೊಳ್
ದೀನ ದುಃಖಗಳಿಗೆ ನೀವು ಶ್ರೀನಿಧಾನರೆನ್ನುವೋಲ್ 3
ಈ ಶರತ್ಸಮಾಗಮಂ ದೇಶಮಾತೆಗೆ ಸಂಭ್ರಮಂ
ದೇಶಭಕ್ತರಿಗುತ್ಸವಂ ಇದೇ ನಮಗೆ ಸಂಭ್ರಮಂ4
ತಂದೆ ಶೇಷಗಿರಿವರಂ ನಂದಿನಿಯ ಕೈಪಿಡಿಯುತಾ
ನಂದದಾಯಕ್ ನೆನಿಸಲೆಂದೆಂದು ಹರಸುತ 5