ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಕಂಡು ನಾನು ಹೇಗೆ ಸುಮ್ಮನಿರಲಿ ಪ ಯಲ್ಲಮ್ಮ ಎಕನಾತಿ ಮೊದಲಾದ ಚಿಲ್ಲರೆ ದೇವರುಗಳಲ್ಲಿ ನಿಷ್ಠೆ ಇಟ್ಟು ||ನಿಲ್ಲದೇ ಭಜಿಸಿ ಸಂತತಾಪುಲ್ಲನಾಭನ ಬಿಟ್ಟು ಕ್ಷುಲ್ಲಕರನ 1 ದೇವರೆಲ್ಲಾ ಸಮ್ಮತವೆಂದುಬೇವಿನ ಉಡಿಗೆ ಊಟಾನಿಟ್ರು ||ಜೀವ ಹರಿಗೆ ಐಕ್ಯವ ಪೇಳುವಕೇವಲ ತಾಮಸ ಜೀವಿಗಳನ 2 ಅಹಂಕಾರದಿಂದಲಿ ಕೆಟ್ಟುದೇಹಿ ಎಂಬೋ ವಾಕ್ಯವ ಬಿಟ್ಟು ||ರಹಸ್ಯದಿಂದಲಿ ಶ್ರೀ ಹರಿಯ ಬಿಟ್ಟುಮೋಹನ್ನ ವಿಠಲನ ಸೋಹಂ ಎಂಬರ 3
--------------
ಮೋಹನದಾಸರು
ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಪ ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ ವರ ಪೋತರಾಜಾ ಬೊಮ್ಮೆಯನು ಬೀರೆದೇವರು ಹಾದಿಬೀದಿಯ ಬಸವಣ್ಣ ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ 1 ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ ಹಳ್ಳದ ತೀರದ ಹಾಳದೇವಿ ಅಮ್ಮ ಜಲದೇವಿ ಜಕ್ಕಮ್ಮನೆಂತೆನಲು ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ 2 ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ ವನಶಕ್ತಿ ಚವಡಮ್ಮ ಜವನಿಕೆ ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ 3 ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ ಮುಂಡೆ ಮೂಕಾರುತಿ ಬೆಂಚೆಮ್ಮನು ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ ಹಿರಚು ಗುಂಪಿನ ಬಳಗ ಕಂಡರೇನಿಲ್ಲ 4 ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ ಅನ್ಯದೇವತೆಗಳ ಭಜನೆ ಹೊಲ್ಲ ಸಿರಿ ವಿಜಯವಿಠ್ಠಲನ ಯುಗಳಪಾದ ಸನ್ನುತಿಸಿದರೆ ಪರಮ ಪದವಿಯಮ್ಮ 5
--------------
ವಿಜಯದಾಸ