ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಾಗೋ ದಯವಾಗೋ ಪ ಹಯಮುಖ ಭಯಕೃದ್ಭಯನಾಶನ ಹರಿ ಅ ದ್ರೌಪದಿ ಮೊರೆ ಕೇಳ್ಯಾಪದ್ಬಾಂಧವ ನೀ ಪೊರೆದಯ್ ರಮಾಪತಿ ನಿರುತ 1 ಖರಮುರ ನರಕಾದ್ಯರ ಸಂಹರಿಸಿದೆ ಪರಮ ಪುರುಷ ಸಂಹರಭವಹರನೆ 2 ಶತ್ರುತಾಪಕ ಜಗತ್ರಯ ವ್ಯಾಪ್ತ ಪ ವಿತ್ರ ಪಾಣಿ ಸರ್ವತ್ರದಿ ಎಮಗೆ 3 ಎಷ್ಟೆಂದುಸುರಲಿ ದುಷ್ಟಜನರು ಬಲು ಕಷ್ಟ ಬಡಿಪ ಬಗೆ ಜಿಷ್ಣು ಸಾರಥಿಯೆ 4 ಗೋಭೂಸುರರಿಗೆ ಭೂಭುಜರ ಭಯ ಪ ರಾಭವಗೈಪುದು ಶ್ರೀ ಭೂರಮಣನೆ 5 ಅಪ್ರಮೇಯ ನೀ ಕ್ಷಿಪ್ರದಿ ಒಲಿದು ಜ ಯಪ್ರದನಾಗು ಸುಪ್ರಹ್ಲಾದವರದನೆ 6 ಯಾತಕೆ ಎಮ್ಮನು ಭೀತಿಗೊಳಿಪೆ ಪುರು ಹೂತವಿನುತ ಜನಗನ್ನಾಥವಿಠ್ಠಲಾ 7
--------------
ಜಗನ್ನಾಥದಾಸರು
ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ ಚಂದಿರವದನೆ ನೋಡುವ ಬಾರೆ ಪ. ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು ಹಾಟಕಾಂಬರಧರನ ನೋಟದಿ ಸುಖಿಸೆ ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ ನಾಟ ನೋಡಿ ಮನ ಕವಾಟವ ಬಿಚ್ಚೆ ಪೂರ್ಣ ನೋಟದಿ ನೋಡುವ 1 ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ ಮ್ಮಂಗವ ಅಂಗಜನೈಯ್ಯಗೀಯುತೆ ಕಂಗಳಿಗ್ಹಬ್ಬವೆ ರಂಗನ ನೋಡುತೆ ಗಂಗಾಜನಕನ ವಲಿಸಲು ನಮಗೆ ಹಿಂಗದ ಮುಕುತಿಯ ರಂಗಗೊಡುವ ಬಾರೆ 2 ಜಯ ಜಗದೀಶನ ಜಯ ರಮಕಾಂತನ ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ ಜಯ ಯದು ತಿಲಕನ ಜಯ ಕೂಡಾಡುವ ಜಯಪ್ರದನಾಗುತೆ ಜಗದಿ ಪೊರೆವ ಬಾರೆ 3
--------------
ಸರಸ್ವತಿ ಬಾಯಿ